ಹರಪನಹಳ್ಳಿ, ಡಿ.21- ಬೆಳಗಾವಿಯಲ್ಲಿ ನಾಡಧ್ವಜವನ್ನು ಸುಟ್ಟು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನ ಗೊಳಿಸಿರುವ, ಎಂ.ಇ.ಎಸ್ ಸಂಘಟನೆಯ ಕಿಡಿಗೇಡಿಗಳಿಗೆ ಸರ್ಕಾರ ಕೂಡಲೇ ಉಗ್ರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ವಿವಿಧ ಸಂಘ ಟನೆಗಳ ಮುಖಂಡರು ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ಮಂಗಳವಾರ ಸಂಜೆ ಪಟ್ಟಣದ ಕುರು ಬಗೇರಿ ಬಳಿ ಇರುವ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ನೂರಾರು ಸಂಖ್ಯೆಯಲ್ಲಿ ರಾಯಣ್ಣನ ಅಭಿಮಾನಿಗಳು ಎಂ.ಇ.ಎಸ್ ಪುಂಡರ ವಿರುದ್ಧ ದಿಕ್ಕಾರ ಕೂಗುತ್ತಾ ಪಂಜಿನ ಮೆರವಣಿಗೆ ಮೂಲಕ ಐ.ಬಿ ವೃತ್ತದಲ್ಲಿ ಜಮಾಯಿಸಿ ಪ್ರತಿಭಟಿಸಿದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ಎಚ್. ವೆಂಕಟೇಶ್ ಮಾತನಾಡಿ, ಕರ್ನಾಟಕದಲ್ಲೇ ಇದ್ದುಕೊಂಡು ಕನ್ನಡಿಗರ ವಿರುದ್ಧ ನಿಂತು ನಾಡ ದ್ರೋಹ ಕೆಲಸ ಮಾಡುತ್ತಿರುವ ಶಿವಸೇನೆ ಕಾರ್ಯಕರ್ತರು ಪದೇ ಪದೇ ಕನ್ನಡಿಗರನ್ನು ಕೆಣುಕುತ್ತಿರುವುದು ಖಂಡನೀಯ ಎಂದರು.
ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಕನ್ನಡ ಧ್ವಜವನ್ನು ಸುಟ್ಟು ಹಾಕಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ಪ್ರತಿಮೆಯನ್ನು ಭಗ್ನ ಗೊಳಿಸಿರುವ ಶಿವಸೇನೆ ಹಾಗೂ ಎಂ.ಇ.ಎಸ್ ಸಂಘಟನೆ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಭಗ್ನ ಗೊಂಡ ಸಂಗೊಳ್ಳಿ ರಾಯಣ್ಣನ ನೂತನ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಗೋಣಿ ಬಸಪ್ಪ, ಕಲ್ಲಹಳ್ಳಿ ಗೋಣೆಪ್ಪ ಮಾತನಾಡಿ, ಬೆಳಗಾವಿ ಮತ್ತು ಮಹಾರಾಷ್ಟ್ರದ ಜನತೆ ಸ್ನೇಹ, ಪ್ರೀತಿ, ಸೌಹಾರ್ದತೆಯಿಂದ ಬದು ಕುತ್ತಿದ್ದಾರೆ, ಕೆಲ ಮೂರ್ಖರಿಂದ ಜನತೆಯ ನೆಮ್ಮದಿ ಹಾಳಾಗುತ್ತಿದೆ. ಯಾವತ್ತೂ ಕರ್ನಾಟಕದ ಬೆಳಗಾವಿ ವಿಭಾಜ್ಯ ಅಂಗ, ಕೊಲ್ಲಾಪುರ ಮತ್ತು ಬೆಳಗಾವಿಯಲ್ಲಿ ನಡೆದ ಘಟನೆಗೆ ಸಂಬಂಧಪಟ್ಟ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರುಗಳಾದ ಭರತೇಶ, ಉದ್ದಾರ ಗಣೇಶ, ಮುಖಂಡ ಪ್ರಕಾಶ್, ಹನುಮಂತಪ್ಪ, ಬಳಿ ಗಾನೂರು ಪರಶುರಾಮ, ಭಂಗಿ ಕೆಂಚಪ್ಪ, ಬಾಲಪ್ಪ ಟಿ.ಮಲ್ಲಿಕಾರ್ಜುನ, ಹರ್ಷ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.