ಹೊನ್ನಾಳಿ ಅರ್ಬನ್ ಸೊಸೈಟಿಗೆ 60 ಲಕ್ಷ ನಿವ್ವಳ ಲಾಭ

ಸಂಘದ 22ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿಯ ಅಧ್ಯಕ್ಷ ಡಾ. ರಾಜಕುಮಾರ್ ಸಂತಸ

ಹೊನ್ನಾಳಿ, ಡಿ.20- ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಪಟ್ಟಣದಲ್ಲಿ ಕಳೆದ 22 ವರ್ಷಗಳಿಂದ 5,485 ಸದಸ್ಯರನ್ನು ಹೊಂದಿ ಸುಲಲಿತವಾಗಿ ಆರ್ಥಿಕ ವ್ಯವಹಾರ ನಡೆಸುತ್ತಾ, ಪ್ರಸ್ತುತ ಸಾಲಿನಲ್ಲಿ 60.37 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಾ.ರಾಜಕುಮಾರ್ ಹೇಳಿದರು.

ಪಟ್ಟಣದ ಹಳೇಪೇಟೆ ಶ್ರೀ ವಿಠಲ ಮಂದಿರದಲ್ಲಿ  22 ವರ್ಷದ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವರ್ಷದ ಆರಂಭದಲ್ಲಿ ಸೊಸೈಟಿಯು ಸದಸ್ಯರುಗಳಿಂದ ವಿವಿಧ ರೀತಿಯ 17.64 ಕೋಟಿ ರೂ. ಸಂಗ್ರಹವಾಗಿದ್ದು,
ವರ್ಷಾಂತ್ಯಕ್ಕೆ 19.62 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ ಎಂದರು. 

ಸದಸ್ಯರುಗಳಿಗೆ 18 ಕೋಟಿ ರೂ ಸಾಲಸೌಲಭ್ಯ ನೀಡಿದೆ. 2020-21ನೇ ಸಾಲಿಗೆ 60.37 ಲಕ್ಷ ರೂ.ನಿವ್ವಳ ಲಾಭ ಗಳಿಸಿರುತ್ತದೆ. ಪ್ರಸ್ತುತ ಸಾಲಿಗೆ ಶೇ.12 ರಷ್ಟು ಷೇರು ಲಾಭಾಂಶ ನೀಡಲು ಆಡಳಿತ ಮಂಡಳಿ ಘೋಷಿಸಿದೆ. 

ಸೊಸೈಟಿಯಲ್ಲಿ ಎಲ್ಲಾ ರೀತಿಯ ಸಾಲ-ಸೌಲಭ್ಯ ವಿರುತ್ತದೆ. ಜೊತೆಗೆ ವಿಮಾ ಯೋಜನೆ ಇದ್ದು ಷೇರುದಾರರು ಅಪಘಾತದಿಂದ ಮರಣ ಹೊಂದಿದರೆ 1 ಲಕ್ಷ ರೂ ವಾರಸುದಾರರಿಗೆ ವಿಮಾ ಹಣವನ್ನು ನೀಡಲಾಗುವುದು. ಸಂಘದ ವತಿಯಿಂದ  3 ಸಾವಿರ ನೀಡುತ್ತಿದ್ದನ್ನು ಮುಂದಿನ ದಿನಗಳಲ್ಲಿ  5ಸಾವಿರ ನೀಡಲಾಗುವುದು ಎಂದರು.

ಸೊಸೈಟಿಯ ಕಾರ್ಯದರ್ಶಿ ಕುಮಾರ ವಾರ್ಷಿಕ ಜಮಾ-ಖರ್ಚನ್ನು ಓದಿದರು.  

ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಹೆಚ್.ವೀರೇಶಪ್ಪ, ನಿರ್ದೇಶಕರಾದ ಜಿ.ಆರ್.ಪ್ರಕಾಶ್, ಎನ್.ಜಯರಾವ್, ಹೆಚ್.ಎಂ.ಶಿವಮೂರ್ತಿ, ಬಿ.ಎಚ್.ರಾಜನಾಯ್ಕ್, ಹೆಚ್.ಬಿ.ಮೋಹನ್, ಕೆ.ಆರ್.ನಾಗರಾಜ್, ಸಿ.ಕೆ.ರವಿಕುಮಾರ, ಬಿ.ಹೆಚ್.ಉಮೇಶ್, ಹೆಚ್.ಎಂ. ಅರುಣ್‍ಕುಮಾರ್, ಎನ್.ಪ್ರಸಾದ್, ಹೆಚ್.ಕೆ.ರೂಪ, ಎನ್.ಎನ್.ನಾಗರತ್ನ, ಎನ್.ಶಾಂತಲಾ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!