ಸಾಲಗಳ ಮೇಲಿನ ಬಡ್ಡಿ ದರ ಕಡಿಮೆ ಮಾಡಲು ನಿರ್ಧಾರ

ಹೊನ್ನಾಳಿಯ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಜೆ. ಶ್ರೀಕಾಂತ್

ಹೊನ್ನಾಳಿ, ಡಿ.20- ಸರ್ವ ಸದಸ್ಯರ ಬೇಡಿಕೆಯ ಮೇರೆಗೆ, ಸಾಲ ಪಡೆದಿರುವವರ ಹಿತರಕ್ಷಣೆಯ ಉದ್ದೇಶದಿಂದ ಮತ್ತು ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಹಿನ್ನಡೆ ಉಂಟಾಗಿರುವ ಕಾರಣ ಸೊಸೈಟಿ ವತಿಯಿಂದ ವಿತರಿಸಲಾಗುವ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೆ. ಶ್ರೀಕಾಂತ್ ಹೇಳಿದರು.

ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಸೋಮ ವಾರ ಹಮ್ಮಿಕೊಂಡ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ಷೇರುದಾರರಿಗೆ ಡಿವಿಡೆಂಡ್ ವಿತರಿಸಲಾಗುವುದಿಲ್ಲ. ಕೆಲ ವರ್ಷಗಳಿಂದ ಅಪೂರ್ಣವಾಗಿರುವ ಗೊಲ್ಲರಹಳ್ಳಿ ಗ್ರಾಮದ ಶ್ರೀ ತರಳಬಾಳು ಸಮುದಾಯ ಭವನದ ಕಾಮಗಾರಿಗೆ ಪ್ರಸಕ್ತ ಸಾಲಿನ ಲಾಭಾಂಶವನ್ನು ನೀಡಲಾಗುವುದು. ಈ ನಿಟ್ಟಿನಲ್ಲಿ ಉದಾರ ಮನೋಭಾವ ಪ್ರದರ್ಶಿಸಿರುವ ಷೇರುದಾರರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಹಿಂದಿನ ವರ್ಷದ ಸಭಾ ನಡಾವಳಿ ಬಗ್ಗೆ ವಿವರಿಸಿ, ಜಮಾ-ಖರ್ಚಿನ ವಿವರ ಮಂಡಿಸಿದ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾರ್ಯದರ್ಶಿ ಎಚ್.ಎನ್. ರುದ್ರೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗಳ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ಹೇಳಿದರು.

ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೆ. ಶ್ರೀಕಾಂತ್ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಎಸ್. ನಾಗರಾಜಪ್ಪ, ನಿರ್ದೇಶಕರಾದ ಕೆ.ಎಂ. ಬಸವಲಿಂಗಪ್ಪ, ಎಸ್.ಎಂ. ಶಕುಂತಲಾ, ಎಂ.ಜಿ. ಬಸವರಾಜಪ್ಪ, ಎಂ.ಸಿ. ನಾಗೇಂದ್ರಪ್ಪ, ಕೆ. ಸಿದ್ಧೇಶ್ವರಪ್ಪ, ಆರ್.ಸಿ. ಶಂಕರಗೌಡ, ಪಿ.ಬಿ, ಶೈಲೇಶ್, ಕೆ.ಎಸ್. ಶಿವಕುಮಾರ್, ಎಂ.ಆರ್. ವಿಕಾಸ್, ಕೆ.ಜಿ. ಮಂಜುಳಾ, ಎನ್. ಕೃಷ್ಣಾನಾಯ್ಕ, ಯು. ಮಲ್ಲೇಶಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!