ಮಳಲಕೆರೆಯಲ್ಲಿ ಮದ್ಯವರ್ಜನೆ ಶಿಬಿರ

ದಾವಣಗೆರೆ, ಡಿ.17- ತಾಲ್ಲೂಕಿನ ಮಳಲಕೆರೆಯಲ್ಲಿ  ಮೊನ್ನೆ ನಡೆದ 1489ನೇ ಮದ್ಯವರ್ಜನೆ ಶಿಬಿರವನ್ನು  ಅರವಿಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್. ಸಿದ್ದಪ್ಪ ಅವರು ಉದ್ಘಾಟಿಸಿದರು.

ಪ್ರತಿಯೊಂದು ಜೀವಿಗೂ ಜೀವ ಇದೆ. ಆ ಜೀವವನ್ನು ಶಾಶ್ವತವಾಗಿ ಉಳಿಸಬೇಕಾದರೆ ಅಂತರಂಗ ಮತ್ತು ಬಹಿರಂಗ ಶುದ್ಧಿ ಇರಬೇಕು. ಮನುಷ್ಯನು ವಿವಿಧ ಆಸೆ ಆಕಾಂಕ್ಷೆಗಳಿಗೆ ಒಳಗಾಗಿ ತನ್ನ ಜೀವನವನ್ನು ಹಾಳು ಮಾಡುತ್ತಿದ್ದಾನೆ. ಅಂತಹ ವ್ಯಕ್ತಿಯನ್ನು ಗುರುತಿಸಿ ಉತ್ತಮ ಜೀವನ ನಡೆಸಲು ಧರ್ಮಸ್ಥಳದ ಮದ್ಯ ವರ್ಜನೆ ಶಿಬಿರಗಳು ಸಾಕ್ಷಿಯಾಗಿವೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಮುರುಗೇಂದ್ರಪ್ಪ ತಿಳಿಸಿದರು.

ದೇಶಕ್ಕೆ ಮಾದರಿಯಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುವುದಲ್ಲದೇ, ಜನರು ಹೊಸ ಬದುಕನ್ನು ಕಟ್ಟಿಕೊಳ್ಳಲು ಮದ್ಯವರ್ಜನೆ ಶಿಬಿರ ದಾರಿದೀಪವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.

ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ, ವರ್ತಕ ಮಹೇಶ್ವರಯ್ಯ ಅವರುಗಳು ಮಾತನಾಡಿದರು.

ವೇದಿಕೆಯಲ್ಲಿ ಮದ್ಯವರ್ಜನೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಯಮ್ಮ, ಗೌರವಾಧ್ಯಕ್ಷ ಸುಭಾಷ್ ಮಲ್ಲಪ್ಪಗೌಡ್ರು, ಮಳಲಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಣುಕಮ್ಮ ಅಣ್ಣಪ್ಪ ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗೇಶ್ ದೇವನಗರಿ, ತಾಲ್ಲೂಕು ಯೋಜನಾ ಧಿಕಾರಿ ಬಾಬು, ಬಾಡ ವಲಯ ಮೇಲ್ವಿಚಾರಕ ತುಕಾರಾಮ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!