ನಿರ್ಮಲ ಹೃದಯಗಳಲ್ಲಿ ಭಗವಂತ ನೆಲೆಸುತ್ತಾನೆ

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಶ್ರೀ ಕೂಡಲಿ ವಿದ್ಯಾಭಿನವ ಸ್ವಾಮೀಜಿ   

ರಾಣೇಬೆನ್ನೂರು, ಡಿ. 17- ಶಾಂತಿ, ಸಮಾಧಾನ, ನಿಸ್ವಾರ್ಥ, ನಿರ್ಮಲ ಮನಸ್ಸಿನ ಭಕ್ತಿಯಿಂದ ಪೂಜಿಸುವ ಹೃದಯಗಳಲ್ಲಿ ಭಗವಂತ ನೆಲೆಸುತ್ತಾನೆ ಎಂದು ಕೂಡಲಿ ಶೃಂಗೇರಿ ಮಠದ ಶ್ರೀ ವಿದ್ಯಾಭಿನವ ವಿದ್ಯಾ ರಣ್ಯ ಭಾರತಿ ಮಹಾಸ್ವಾಮಿಗಳು ನುಡಿದರು.

ನಗರದ ಕುರುಬಗೇರಿ ಶ್ರೀ ಬನಶಂಕರಿದೇವಿ ನೂತನ ದೇವಸ್ಥಾನ ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.

ಮಂದಿರ ನಿರ್ಮಾಣ ಕಾರ್ಯ ಗಳು ಎಲ್ಲ ಯುಗಗಳಲ್ಲೂ ನಡೆಯು ತ್ತಲೇ ಇವೆ. ದೇವರು ಆಪತ್ಬಾಂಧವರು. ಹಿಂದೆ ಪಾಂಡವರಿಗೆ, ದ್ರೌಪದಿಗೆ ಬಂದ ಸಂಕಷ್ಟ ಸಮಯದಲ್ಲಿ ಕೃಷ್ಣ ಜೊತೆಗಿದ್ದು ರಕ್ಷಿಸಿದ. ಇಂತಹ ಉದಾಹರಣೆಗಳು ಬಹಳಷ್ಟಿವೆ. ದೇವರು ನಿರ್ಮಲ ಮನಸ್ಸಿನ ಭಕ್ತರ ಸಂಗಾತಿ  ಎಂದು ಶ್ರೀಗಳು ನುಡಿದರು.

 ಶಿರಹಟ್ಟಿ ಪಕ್ಕೀರ ಸಿದ್ದರಾಮ ಸ್ವಾಮಿಗಳು, ಪ್ರಕಾಶ ಕೋಳಿವಾಡ ಮಾತನಾಡಿ ಮಾತನಾಡಿದರು. ನಿವೃತ್ತ ಶಿಕ್ಷಕ ಗುರುಬಸಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಕಮಿಟಿ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮರಿಸ್ವಾಮಿ ಪೂಜಾರ, ಬಸವರಾಜ ಮೈಲಾರ, ಶಿವಪ್ಪ ಹೆದ್ದೇರಿ, ಶಂಕರಪ್ಪ ಬುರಡಿಕಟ್ಟಿ, ನಾಗರಾಜ ಉದಗಟ್ಟಿಗೌಡ್ರ, ನಿರ್ಮಲಾ ಪೂಜಾರ, ಪಾರ್ವತಮ್ಮ ಗೌಡಶಿವಣ್ಣನವರ, ಡಾ. ಸಂಜಯ ನಾಯಕ, ವಿರುಪಾಕ್ಷಿ ಬೆಳಕೇರಿ, ಕವಿತಾ ಹೆದ್ದೇರಿ,  ಸಿದ್ದಪ್ಪ ಹಾದಿಮನಿ ಉಪಸ್ಥಿತರಿದ್ದರು.

error: Content is protected !!