ಭಾರ ಎತ್ತುವ, ದೇಹದಾರ್ಢ್ಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಮಂಜುನಾಥ್, ಮುಕ್ತಿಗೆ ಗೆಲುವಿನ ಗರಿ

ಭಾರ ಎತ್ತುವ, ದೇಹದಾರ್ಢ್ಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಮಂಜುನಾಥ್, ಮುಕ್ತಿಗೆ ಗೆಲುವಿನ ಗರಿ - Janathavaniದಾವಣಗೆರೆ, ಡಿ.17- ನಗರದ ಮಂಜುನಾಥ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಭಾರ ಎತ್ತುವ, ದೇಹದಾರ್ಡ್ಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಕಾಲೇಜಿನ ಮೊದಲ ಬಿಎ ವಿದ್ಯಾರ್ಥಿ ಡಿ. ಮಂಜುನಾಥ್ ಫವರ್ ಲಿಪ್ಟಿಂಗ್ ನ 59 ಕೆಜಿ ವಿಭಾಗದಲ್ಲಿ ಮೊದಲನೇ ಸ್ಥಾನ ಪಡೆದು ಸ್ಟ್ರಾಂಗ್ ಮ್ಯಾನ್ ಆಫ್ ಯೂನಿವರ್ಸಿಟಿ ಎನಿಸಿಕೊಂಡಿದ್ದಾರೆ.

ಅಲ್ಲದೇ, ಬಾಡಿ ಬಿಲ್ಡಿಂಗ್ ನ 60 ಕೆಜಿ ವಿಭಾಗದಲ್ಲಿ ಮೊದಲನೇ ಸ್ಥಾನ ಪಡೆದು ಮಿಸ್ಟರ್ ಡಿವಿಜಿ ಯೂನಿವರ್ಸಿಟಿ ಟೈಟಲ್ ಪಡೆದಿದ್ದಾರೆ. ಭಾರ ಎತ್ತುವ ಸ್ಪರ್ಧೆಯ 60 ಕೆಜಿ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 

ಅದೇ ರೀತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೊದಲನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಮುಕ್ತಿ ಎಂಬಾಕೆಯು ಸಹ ಭಾರ ಎತ್ತುವ ಸ್ಪರ್ಧೆಯ 45 ಕೆಜಿ ವಿಭಾಗದಲ್ಲಿ ಮೊದಲನೆ ಸ್ಥಾನ, ಪವರ್ ಲಿಪ್ಟಿಂಗ್ ನಲ್ಲಿ 47 ಕೆಜಿ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

error: Content is protected !!