ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ನಗರದಲ್ಲಿ ಬ್ಯಾಂಕ್ ನೌಕರರ ಮುಷ್ಕರ
ದಾವಣಗೆರೆ, ಡಿ. 16- ಬ್ಯಾಂಕ್ ಖಾಸಗೀಕರಣ ವಿರೋಧಿಸಿ, ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ವತಿಯಿಂದ ಎಸ್‌ಬಿಐ ಮುಂಭಾಗ ಇಂದು ಪ್ರತಿಭಟನೆ ನಡೆಸಲಾಯಿತು.
ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೆೋಳಿ ಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಖಂಡಿಸಿದೆ.
ವೇದಿಕೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಮಂಡಿಪೇಟೆ ಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂಭಾಗ ಮತ ಪ್ರದರ್ಶನ ನಡೆಯಿತು.
ವೇದಿಕೆ ಜಿಲ್ಲಾ ಸಹ ಸಂಚಾಲಕ ಕೆ.ಎನ್. ಗಿರಿರಾಜ್ ಮಾತನಾಡಿ, ಸುಧಾರಣೆಯ ನೆಪದಲ್ಲಿ ಬ್ಯಾಂಕುಗಳ ಖಾಸಗೀಕರಣ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ ಮತ್ತು ಖಾಸಗೀ ಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯಲ್ಲಿ ಗಣನೀಯ ಹೆಚ್ಚಳ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಸರ್ಕಾರಿ ಬಂಡವಾಳದ ಹಿಂತೆಗೆತ ಮತ್ತು ಮಾರಾಟ ಮೊದಲಾದ ರಾಷ್ಟ್ರೀಕರಣ ವಿರೋಧಿ ಘೋಷಣೆಗಳನ್ನು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಿರುವುದನ್ನು ಖಂಡಿಸಿ ಈ ಮುಷ್ಕರ ನಡೆಸುತ್ತಿರುವುದಾಗಿ ಹೇಳಿದರು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹೆಚ್.ಜಿ. ಉಮೇಶ್ ಮಾತನಾಡಿ, 1969 ರ ಬ್ಯಾಂಕ್ ರಾಷ್ಟ್ರೀಕರಣ ಪೂರ್ವದಲ್ಲಿ 550 ಖಾಸಗಿ ಬ್ಯಾಂಕು ಗಳು ಹಾಗೂ ನಂತರದಲ್ಲಿ 38 ಖಾಸಗಿ ಬ್ಯಾಂಕುಗಳು ಮುಳುಗಡೆಯಾಗಿವೆ. ಆದರೆ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳ ಅಸ್ತಿತ್ವಕ್ಕೆ ಧಕ್ಕೆಯಾಗಿಲ್ಲ. ಸಾರ್ವಜನಿಕ ಬ್ಯಾಂಕುಗಳು ದೇಶದ ಆಸ್ತಿ. ಇದನ್ನು ರಕ್ಷಿಸಿ, ಬೆಳೆಸಬೇಕೆಂದು ಕರೆ ನೀಡಿದರು.
ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಮಾತನಾಡಿ, ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೌಲಭ್ಯ ಸಿಗಬೇಕು. ಈಗಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕು ಹಾಗೂ ವಿಸ್ತಾರ ಗೊಳಿಸಬೇಕೆಂದು ಒತ್ತಾಯಿಸಿದರು.
ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಮುಖಂಡ ಕಿರಣ್ ರಜಪೂತ್ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ಖಜಾಂಚಿ ಜಿ.ಬಿ. ಶಿವಕುಮಾರ್ ಮಾತನಾಡಿದರು.
ಬಿ. ಆನಂದಮೂರ್ತಿ, ಹೆಚ್.ಜಿ. ಸುರೇಶ್, ಹೆಚ್.ಎಸ್. ತಿಪ್ಪೇಸ್ವಾಮಿ, ಬಿ.ಎ. ಸುರೇಶ್, ವಿನೋದ್ ತೋರಗಲ್, ಆರ್. ಆಂಜನೇಯ, ವಿ.ಆರ್. ಹರೀಶ್, ಕೆ. ಶಶಿಶೇಖರ್, ಎಂ.ಎಸ್. ವಾಗೀಶ್, ಎಂ.ಪಿ. ಕಿರಣಕುಮಾರ್, ವಿ.ಎಂ. ತಿಪ್ಪೇಸ್ವಾಮಿ, ಬಿ.ಎ. ಸುರೇಶ್, ಶಶಿಕುಮಾರ್, ದುರುಗಪ್ಪ, ಮಂಜುನಾಥ್, ಅನಿಲ್ ಕುಮಾರ್, ಕಾಡಜ್ಜಿ ವೀರಪ್ಪ, ರವಿಶಂಕರ್, ಅಜಯ್ ಕುಮಾರ್, ಎಂ.ಎ. ಸಿದ್ಧಲಿಂಗಯ್ಯ, ಶಾರದಾ ಮೂಡಲಗಿರಿಯಪ್ಪ, ದಿಳ್ಳೆಪ್ಪ, ಜ್ಞಾನೇಶ್ವರ, ಜಗಳೂರು ತಿಪ್ಪೇಸ್ವಾಮಿ, ರಮೇಶ್, ಶಿವಮೂರ್ತಿ ಪೂಜಾರ್, ಡಿ.ಎ. ಸಾಕಮ್ಮ, ಶ್ವೇತಾ, ನಿತ್ಯಾನಂದ ಡೊಂಗ್ರೆ, ದೀಪಾ, ಗೀತಾ, ರೇಖಾ, ಸುಮಂತ್ ಭಟ್, ಟಿ.ಕೆ. ಗೊಂಬಿ, ಹೆಚ್. ನಾಗರಾಜ್, ಶಶಿಕುಮಾರ್, ಆಶಾ ಜ್ಯೋತಿ, ಸುನಂ ದಮ್ಮ, ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು.