ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಆರೋಗ್ಯ ಶಿಬಿರಗಳು ಅವಶ್ಯಕ

ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹರಪನಹಳ್ಳಿ, ಡಿ.15- ಶಿಕ್ಷಣ ದಾಸೋಹ, ಅನ್ನ ದಾಸೋಹದ ಜೊತೆಗೆ ಮಠದ ಆಶ್ರಯದಲ್ಲಿ ಅರೋಗ್ಯ ಶಿಬಿರಗಳನ್ನು ಪ್ರತಿವರ್ಷ ಏರ್ಪಾಡು ಮಾಡಲಾಗುತ್ತಿದೆ. ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಆರೋಗ್ಯ ಶಿಬಿರಗಳು ಅವಶ್ಯಕ ಎಂದು ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  

ಪಟ್ಟಣದ  ತೆಗ್ಗಿನಮಠದ ಆವರಣದಲ್ಲಿ ಎಸ್.ಸಿ.ಎಸ್. ಔಷಧ ಮಹಾವಿದ್ಯಾಲಯ , ಹರಪನಹಳ್ಳಿ  ಹಾಗೂ ಎಸ್.ಎಸ್.ಐ.ಎಂ.ಎಸ್- ಸ್ವರ್ಶ್ ಮತ್ತು ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಉಚಿತ ಕೀಲು, ಮೂಳೆ ತಪಾಸಣೆ ಮತ್ತು ಹೃದಯ ರೋಗ ತಪಾಸಣೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಹಿಂದುಳಿದ ವರ್ಗದವರಿಗೆ ಉಪಯೋಗ ವಾಗಲಿ ಎಂದು ಇಂತಹ ಶಿಬಿರಗಳನ್ನು ನಡೆಸಲಾಗುತ್ತದೆ.  ಶ್ರೀ ಮಠಗಳಲ್ಲಿ ನಡೆಯುವ ಕಾರ್ಯಕ್ರಮಗಳು ಇತರೆ ಮಠಗಳಿಗಿಂತ ಭಿನ್ನವಾಗಿರಬೇಕೆಂಬುದು ನಮ್ಮ ಬಯಕೆ ಯಾಗಿದೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಹಾಲಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆರೋಗ್ಯಕ್ಕೆ
ಹೆಚ್ಚು ಮಹತ್ವ ನೀಡಬೇಕು. 

ಪ್ರತಿಯೊಬ್ಬರೂ 2 ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದರು.

ತೆಗ್ಗಿನ ಮಠದ ಆಡಳಿತಾಧಿಕಾರಿ ಟಿ.ಎಂ.ಚಂದ್ರಶೇಖರಯ್ಯ ಮಾತನಾಡಿ, ಜನರು ಹಣ ಗಳಿಕೆಯ ಭರದಲ್ಲಿ ಆರೋಗ್ಯದ ಕಡೆಗೆ ಗಮನ ನೀಡದಿರುವ ಬಗ್ಗೆ ವ್ಯಾಕುಲತೆ ವ್ಯಕ್ತಪಡಿಸಿದರು.

ಸಿ.ಪಿ.ಐ. ನಾಗರಾಜ್ ಕಮ್ಮಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಫಾರ್ಮಸಿ ಕಾಲೇಜು ಪ್ರಾಚಾರ್ಯ ನಾಗೇಂದ್ರರಾವ್, ಭಂಗಿ ಬಸಪ್ಪ ಪಿಯು ಕಾಲೇಜು ಪ್ರಾಚಾರ್ಯ ಅರುಣಕುಮಾರ್, ವೀರನಗೌಡ್ರು,  ಉಪಪ್ರಾಚಾರ್ಯ ಇಟಿಗಿ ಷಣ್ಮುಖ, ಡಾ.ಪ್ರವೀಣ್ ಅಣ್ವೇಕರ್,
ಡಾ.ರಾಜೇಶ್, ರವಿಶಂಕರ್ ಸೇರಿದಂತೆ ಇತರರಿದ್ದರು.

error: Content is protected !!