ಮಲೇಬೆನ್ನೂರು, ಡಿ. 15- ಕೊಮಾರನಹಳ್ಳಿ ಗ್ರಾಮದ ಹಳೇ ಊರು ಮತ್ತು ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಗ್ರಾ.ಪಂ ಸದಸ್ಯ ಮಡಿವಾಳರ ಬಸವರಾಜ್ ಅವರು ಸ್ಕೂಲ್ ಬ್ಯಾಗ್‌ಗಳನ್ನು ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ದಾನಪ್ಪ ಹನುಮಂತಪ್ಪ ಅವರು ಎನ್-95 ಮಾಸ್ಕ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ರೇಖಾ, ಮಂಜುಳಮ್ಮ ಮತ್ತು ಅಂಗನವಾಡಿ ಕಾರ್ಯಕರ್ತೆ ಅನುಸೂಯಮ್ಮ, ಮಂಜುಳ, ಶೃತಿ ಅವರನ್ನು ಕೋವಿಡ್ ವೇಳೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ನಿಮಿತ್ಯ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ತಾ.ಪಂ.ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ.ಮಂಜುನಾಥ್, ಶಿಕ್ಷಕಿ ರೇಣುಕಮ್ಮ ಅವರುಗಳು ಮಾತನಾಡಿ, ಶಾಲೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ಕಳಕಳಿ ಹೊಂದಿರುವ ದಾನಪ್ಪ, ಹನುಮಂತಪ್ಪ ಮಡಿವಾಳರ ಬಸವರಾಜ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
`ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್ ಮಾತನಾಡಿ, ಉತ್ತಮ ಪರಿಸರದಲ್ಲಿರುವ ಈ ಶಾಲೆ ತಾಲ್ಲೂಕಿಗೆ ಮಾದರಿ ಶಾಲೆಯಾಗಿ ಹೊರ ಹೊಮ್ಮುವಂತೆ ಗ್ರಾಮಸ್ಥರು, ಎಸ್‌ಡಿಎಂಸಿ ಸಮಿತಿ, ಶಿಕ್ಷಕರು ನೋಡಿ ಕೊಳ್ಳಬೇಕೆಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಸಂತೋಷಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ನೇತ್ರಾವತಿ ಹನುಮಂತಪ್ಪ, ಪರಮೇಶ್ವರನಾಯ್ಕ, ಎಸ್.ಡಿ.ರಂಗನಾಥ್, ದಾನಪ್ಪ ಅರುಣ್ ಕುಮಾರ್, ಅರ್ಚನಾ ಬಸವರಾಜ್, ಎಸ್.ಹೆಚ್. ಹಾಲೇಶ್, ಆಂಜನೇಯ, ನಾಗರಾಜ್‌ನಾಯ್ಕ್, ಶಾಲಾ ಮುಖ್ಯ ಶಿಕ್ಷಕರಾದ ಸುಲೋಚನಮ್ಮ, ಶಿಕ್ಷಕರಾದ ರಾಮಪ್ಪ ಗೊಣೇರ್, ಭೂಮೇಶ್, ಮಂಜಪ್ಪ, ನಜ್ಮಾ, ಹಬೀಬ್ ಮತ್ತು ಕುಂಬಳೂರು ವಾಸು ಭಾಗವಹಿಸಿದ್ದರು.