ರಾಣೇಬೆನ್ನೂರು, ಡಿ.14- ನೂತನವಾಗಿ ನಿರ್ಮಿಸಿದ ಇಲ್ಲಿನ ಕುರುಬಗೇರಿ ಪ್ರಾಚೀನ ಶ್ರೀ ಬನಶಂಕರಿ ದೇವ ಸ್ಥಾನದ ಉದ್ಘಾಟನಾ ಸಮಾರಂಭದ ಎರಡನೇ ದಿನ ಹಳೇ ಇಕ್ಕೇರಿ ಶಾರದಾಂಬ ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಶರ್ಮಾ ಅವರು ದೇವಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯ ವಿವಿಧ ಪೂಜೆಗಳನ್ನು ಸಲ್ಲಿಸಿದರು.
ಪ್ರಾಣ ಪ್ರತಿಷ್ಠಾಪನೆ, ಪ್ರತಿಷ್ಠಾ ಹೋಮ, ಅಷ್ಟ ಬಂದ, ಜೀವ ಕುಂಭಾ ಭಿಷೇಕ, ಕಲಾ ತತ್ವಾ ದಿವಸ ಹೋಮ, ಮೂಲ ಮಂತ್ರ ಹವನ, ಮಹಾ ಪೂಜೆ, ಮಹಾ ಗಣಪತಿ ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ಕಾರ್ಯಕ್ರಮ ಗಳ ನಂತರ ಭಕ್ತರು ತಂದ ಹೋಳಿಗೆ ನೈವೇದ್ಯ ಸಲ್ಲಿಸಿದರು.
ಬಾಗಲಕೋಟೆ, ಬೆಳಗಾವಿ, ಧಾರವಾಡ ಮುಂತಾದ ಜಿಲ್ಲೆಗಳು ಹಾಗೂ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರ ಮತ್ತು ವಿವಿಧ ಗ್ರಾಮಗಳ ಭಕ್ತರು ತಂದ ಹೋಳಿಗೆ ಸುಮಾರು 35 ರಿಂದ 40 ಸಾವಿರದಷ್ಟಿದ್ದು, ಅಪಾರ ಭಕ್ತರು ಪ್ರಸಾದ ಸ್ವೀಕರಿಸಿದರು ಎಂದು ಕಮಿಟಿಯ ಶಂಕರಪ್ಪ ಬುರಡಿಕಟ್ಟಿ, ವಿರುಪಾಕ್ಷಿ ಬೆಳಕೇರಿ, ಬಸವರಾಜ ಮೈಲಾರ ಮುಂತಾದವರು ತಿಳಿಸಿದರು.