ಹರಿಹರ, ಡಿ. 13 – ನಗರದ ಇಂದ್ರಾನಗರ ಬಡಾವಣೆಯ ಒಂದನೇ ಮೇನ್, ಒಂದನೇ ಕ್ರಾಸ್ನ ಮಹಮ್ಮದ್ ಶಫಿ ಸಾಬ್ ಮತ್ತು ಇಬ್ರಾಹಿಂ ರವರ ಮನೆಗೆ ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಘಟನೆ ನಡೆದಾಗ ಮನೆಯವರು ಇರಲಿಲ್ಲ. ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಅಕ್ಕ ಪಕ್ಕದ ಮನೆಯವರು ನೋಡಿ ಅಗ್ನಿಶಾಮಕ ಠಾಣೆಯ ಗಮನಕ್ಕೆ ತಂದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತ ತಡೆದಿದ್ದಾರೆ.
ಸ್ಥಳಕ್ಕೆ ಶಾಸಕ ಎಸ್ ರಾಮಪ್ಪ ಭೇಟಿ ಮಾಡಿ ನೊಂದ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಪರಿಹಾರವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಶಫಿ, ಆಸೀಫ್ ಜುನೇದಿ, ಬಾಷಾ, ದಾದಾಪೀರ್ ಭಾನುವಳ್ಳಿ, ಗೌಸ್ಪೀರ್, ಉಮ್ಮರ್ ಭಾಷಾ ಮತ್ತಿತರರಿದ್ದರು.