ಎಲೆಬೇತೂರಿನ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಾಮದೇವಪ್ಪ
ದಾವಣಗೆರೆ, ಡಿ.12- ಎಲೆಬೇತೂರು ಗ್ರಾಮದ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ಶ್ರೀ ತರಳಬಾಳು ನರ್ಸರಿ, ಪ್ರೈಮರಿ, ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎಂ ಬಸವರಾಜಪ್ಪ ವಹಿಸಿದ್ದರು.
ತರಳಬಾಳು ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಸನ್ಮಾನಿತರ ಪರಿಚಯ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ವಾಮದೇವಪ್ಪ, ಪ್ರತಿ ಗ್ರಾಮದಲ್ಲಿ ಕನ್ನಡ ಧ್ವಜ ಸ್ತಂಭ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಪ್ರತಿ ಗ್ರಾಮ ಹೋಬಳಿ ಮಟ್ಟದಲ್ಲಿ ಕನ್ನಡ ಪಡೆಗಳನ್ನು ಕಟ್ಟುವ ಯೋಚನೆಯಲ್ಲಿದ್ದೇವೆ ಎಂದು ತಿಳಿಸಿದರು.
ಪ್ರೌಢಶಾಲೆಯಲ್ಲಿ ಕನ್ನಡ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಡ್ತಿ ಪಡೆದು ಮುಖ್ಯೋಪಾಧ್ಯಾಯರಾಗಿ ವರ್ಗಾವಣೆಗೊಂಡ ಕನ್ನಡ ಶಿಕ್ಷಕ ಕೆ. ಬಸವರಾಜು ಅವರಿಗೆ ಸನ್ಮಾನಿಸಿ, ಬೀಳ್ಕೊಡಲಾಯಿತು.
ಶ್ರೀ ತರಳಬಾಳು ನರ್ಸರಿ, ಪ್ರೈಮರಿ, ಪ್ರೌಢಶಾಲೆಯ ಅಧ್ಯಕ್ಷ ಎಚ್. ಬಸವರಾಜಪ್ಪ ಸನ್ಮಾನಿತರ ಕುರಿತು ಮಾತನಾಡಿದರು.
ಉಪಾಧ್ಯಕ್ಷ ತೋಟದ ರಾಜಪ್ಪ, ಕಾರ್ಯದರ್ಶಿ ಬಿ. ವಿರುಪಾಕ್ಷಪ್ಪ ಸ್ಥಳೀಯ ಸಲಹಾ ಸಮಿತಿಯ ಸದಸ್ಯ ಬಿ.ಜಿ ಸಂಗನಗೌಡ್ರು, ಮರಡಿ ಅಶೋಕ್ ಕುಮಾರ್, ಎಚ್.ಎಸ್. ಚೇತನ್‌ಕುಮಾರ್, ತಾಲ್ಲೂಕು ಕಸಾಪ ಮಾಜಿ ನಿರ್ದೇಶಕ ಎಮ್. ಷಡಕ್ಷರಪ್ಪ ದೈಹಿಕ ಶಿಕ್ಷಕ ಬಸವರಾಜ್ ಪಾಟೀಲ್ ಮತ್ತು ಿತರರು ಉಪಸ್ಥಿತರಿದ್ದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಕೆ. ಹಲಗಣ್ಣನವರ್ ಸ್ವಾಗತಿಸಿದರು.