ಹರಪನಹಳ್ಳಿ, ಡಿ. 12- ಸ್ಪೇಸ್ ಮೀಡಿಯಾ ಸಂಸ್ಥೆ ವತಿಯಿಂದ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಈಚೆಗೆ ನಡೆದ ಮರಳಿ ಸಂಸ್ಕೃತಿ-3ರ ನಿಮ್ಮ ನಡಿಗೆ ಸಂಸ್ಕೃತಿ ಕಡೆಗೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ತ್ರಿಜಲ ಸಂಗಮ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಉಪ್ಪಾರ ಭಗೀರಥ ಪೀಠದ ಶ್ರೀಗಳು, ಆದಿಚುಂಚನಗಿರಿ ಶ್ರೀಗಳ ಪರವಾಗಿ ಭಾಗವ ಹಿಸಿದ್ದ ಹಾಸನ ಮತ್ತು ರಾಮನಗರ ಪೀಠದ ಶ್ರೀಗಳ ಸಾನ್ನಿಧ್ಯದಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ದೇಶ, ನಾಡು-ನುಡಿ ಜನರ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ 15 ಜನ ಸಾಧಕರಿಗೆ ತ್ರಿಜಲ ಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.