ದಾವಣಗೆರೆ,ಡಿ.12 – ಹೆಲಿಕ್ಯಾಪ್ಟರ್ ದುರಂತದಲ್ಲಿ ಮಡಿದ ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪನ್ ರಾವತ್, ಪತ್ನಿ ಶ್ರೀಮತಿ ಮಧುಲಿಕ ರಾವತ್ ಮತ್ತು ಸೇನಾ ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆಯಿತು.
ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಅವರ ಅಧ್ಯಕ್ಷತೆಯಲ್ಲಿ ಏರ್ಪಾ ಡಾಗಿದ್ದ ಈ ಕಾರ್ಯಕ್ರಮದಲ್ಲಿ ಬಿಪಿನ್ ರಾವತ್ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ. ವೀರಣ್ಣ, ನಿರ್ದೇಶಕರುಗಳಾದ ರಮಣಲಾಲ್ ಪಿ. ಸಂಘವಿ, ಕಿರುವಾಡಿ ವಿ.ಸೋಮಶೇಖರ್, ಎ.ಹೆಚ್. ಕುಬೇರಪ್ಪ, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶಂಕರ್ ಖಟಾವ್‌ಕರ್, ಎಸ್.ಕೆ. ಪ್ರಭು ಪ್ರಸಾದ್, ಶ್ರೀಮತಿ ಪಿ.ಎಂ. ಶಶಿಕಲಾ ರುದ್ರಯ್ಯ, ಕೆ.ಎಂ. ಜ್ಯೋತಿಪ್ರಕಾಶ್, ಪಿ.ಹೆಚ್.ವೆಂಕಪ್ಪ, ಬಿ.ನಾಗೇಂದ್ರಚಾರಿ, ಶ್ರೀಮತಿ ಅನಿಲಾ ಇಂದೂಧರ್ ನಿಶಾನಿಮಠ್, ಎ. ಕೊಟ್ರೇಶ್, ಶ್ರೀಮತಿ ಉಮಾ ವಾಗೇಶ್, ವೃತ್ತಿಪರ ನಿರ್ದೇಶಕರುಗಳಾದ ಆರ್.ವಿ. ಶಿರಸಾಲಿಮಠ್, ಕಿರಣ್ ಆರ್. ಶೆಟ್ಟಿ, ನಿರ್ವಹಣಾ ಮಂಡಳಿ ಸದಸ್ಯರಾದ ಕೆ.ಎಂ. ಬಸವರಾಜ್, ಶ್ರೀಮತಿ ಜಿ.ಸಿ. ವಸುಂಧರಾ, ಶ್ರೀಮತಿ ಕೆ.ಎಂ. ಶೈಲಾ, ವಿಶೇಷ ಆಹ್ವಾನಿತರಾದ ಜಿ.ಕೆ.ವೀರಣ್ಣ, ಕೆ.ಹೆಚ್. ಶಿವಯೋಗಪ್ಪ, ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.