ಸಿದ್ದರಾಮ ಜಯಂತಿಗೆ ನಂದಿಗುಡಿ ಶ್ರೀಗಳಿಗೆ ಆಹ್ವಾನ

ಮಲೇಬೆನ್ನೂರು, ಡಿ.12 – ತಿಪಟೂರಿನಲ್ಲಿ 2022ರ ಜನವರಿ 14 ರಂದು ಹಮ್ಮಿಕೊಂಡಿರುವ ಶ್ರೀ ಗುರು ಸಿದ್ದರಾಮೇಶ್ವರರ 849ನೇ ಜಯಂತ್ಯೋತ್ಸವಕ್ಕೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸ್ವಾಗತ ಸಮಿತಿಯವರು ಆಹ್ವಾನಿಸಿದರು.

ಪ್ರತಿ ವರ್ಷ ಜನವರಿ 14 ಮತ್ತು 15 ರಂದು ಆಚರಿಸುತ್ತಾ ಬರುತ್ತಿದ್ದ ಸಿದ್ದರಾಮ ಜಯಂತಿಯನ್ನು ಕೋವಿಡ್‍ ಕಾರಣದಿಂದ ಈ ಬಾರಿ ಜನವರಿ 14 ರಂದು ಒಂದು ದಿನ ಮಾತ್ರ ನಡೆಸಲಾಗುವುದೆಂದು ಸ್ವಾಗತ ಸಮಿತಿ ಅಧ್ಯಕ್ಷ ತಿಪಟೂರಿನ ಮಧು `ಜನತಾವಾಣಿ’ ಗೆ ತಿಳಿಸಿದರು.

ನೊಳಂಬ ವೀರಶೈವ ಸಂಘದ ಕೇಂದ್ರ ಸಮಿತಿ ತುಮಕೂರು ಜಿಲ್ಲಾ ನಿರ್ದೇಶಕ ಸಂಗಮೇಶ್ವರ, ದಾವಣಗೆರೆ ಜಿಲ್ಲೆಯ ಮಾಜಿ ನಿರ್ದೇಶಕ ಜಿಗಳಿ ಇಂದೂಧರ್, ವಕೀಲ ನಂದಿತಾವರೆ ತಿಮ್ಮನಗೌಡ, ವಾಸನದ ನಂದಿಗೌಡ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!