ದಾವಣಗೆರೆ, ಡಿ.12- ನಗರದ 17 ನೇ ವಾರ್ಡ್ ಪಿಜೆ ಬಡಾವಣೆಯ ವನಿತಾ ಸಮಾಜದ 101 ನೇ ಬೂತ್ನಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉತ್ತರ ವಲಯದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಅವರ ನೇತೃತ್ವದಲ್ಲಿ ಪಿಜೆ ಬಡಾವಣೆಯ ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಅವರ ಸದಸ್ಯತ್ವ ಪಡೆದು ಕಾರ್ಯಕ್ರಮ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯ ಪಂಚಪ್ಪ ತೆರದಾಳ್, ರೇವಣಪ್ಪ, ಪರಸಪ್ಪ ಮಧು ಪವಾರ್, ಪರಶುರಾಮ್, ದೀಪಕ್ ಜಕ್ಕಲಿ, ವೆಂಕಟೇಶ್, ಸತೀಶ್ ಪಿಸಾಳೆ, ವೆಂಕಟೇಶ್ ಪಿಸಾಳೆ, ಯುವರಾಜ್ ಇನ್ನು ಮುಂತಾದವರಿದ್ದರು.