ರಾಷ್ಟ್ರ ರಕ್ಷಣೆಗೆ ರಾವತ್‌ರಂತಹ ದೇಶ ರಕ್ಷಕರು ಅಗತ್ಯ

ದಾವಣಗೆರೆ, ಡಿ.9- ಸೇನಾ ಹೆಲಿಕಾಪ್ಟರ್ ಪತನದಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಕುಟುಂಬ ಸೇರಿದಂತೆ ಹಿರಿಯ ಸೇನಾ ಪಡೆಯ ರಕ್ಷಣಾಧಿಕಾರಿಗಳ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಸಮ್ಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೌನಾಚರಿಸಿ, ಸಂತಾಪ ಸೂಚಿಸಿದರು.

ಈ ವೇಳೆ ಮಾತನಾಡಿದ ಎಸ್ಸೆಸ್, ಭಾರ ತೀಯ ಸೇನೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾಧಿಕಾರಿಗಳ ಸಾವು ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಬಿಪಿನ್ ರಾವತ್ ಅವರು ದೇಶದ ಸೇನಾ ಪಡೆಗಳನ್ನು ಆಧುನಿಕಗೊಳಿಸಿ ರಾಷ್ಟ್ರ ರಕ್ಷಣೆಗೆ ತಮ್ಮ ಜೀವವನ್ನೇ ಪಣಕ್ಕಿಟ್ಟಂತಹವರು. ರಾವತ್ ಅವರು ತಮ್ಮ ಸೇವೆಯಲ್ಲಿ ಅನೇಕ ಯುದ್ಧಗಳನ್ನು ಮುನ್ನಡೆಸಿ ಶತ್ರು ರಾಷ್ಟ್ರಗಳಿಗೆ ಸಿಂಹಸ್ವಪ್ನವಾಗಿ ದ್ದರು. ಕೊನೆಗೆ ರಾಷ್ಟ್ರ ರಕ್ಷಣೆಗಾಗಿಯೇ ತಮ್ಮ ಪ್ರಾಣವನ್ನರ್ಪಿಸಿದರು ಎಂದು ಸ್ಮರಿಸಿದರು.

ಬಿಪಿನ್ ರಾವತ್ ಅವರಂತಹ ದೇಶ ರಕ್ಷಕರ ಅಗತ್ಯವಿದೆ ಎಂದ ಎಸ್ಸೆಸ್‌, ಜನರಲ್ ಬಿಪಿನ್ ರಾವತ್ ಮತ್ತವರ ಕುಟುಂಬ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಬಂಧು-ಬಳಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ನಗರಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಉಮಾ ಶಂಕರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ನಾಗರತ್ನಮ್ಮ, ಆಶಾ ಮುರುಳಿ, ಮಂಗಳಮ್ಮ, ಕವಿತಾ ಚಂದ್ರ ಶೇಖರ್, ಗೀತಾ ಪ್ರಶಾಂತ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಉಮಾ ಕುಮಾರ್, ಶುಭಮಂಗಳ, ಸುನಿತಾ ಭೀಮಣ್ಣ, ಹಿಂದುಳಿದ ವಿಭಾಗದ ಅಧ್ಯಕ್ಷ ಹೆಚ್. ಗುರುರಾಜ್, ವಕೀಲರ ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್, ಎನ್.ಎಂ. ಆಂಜನೇಯ ಗುರೂಜಿ, ಸಿದ್ದೇಶ್, ಸಾಮಾಜಿಕ ಜಾಲತಾಣದ ಹರೀಶ್ ಕೆ.ಎಲ್. ಬಸಾಪುರ, ಯುವ ಕಾಂಗ್ರೆಸ್‍ನ ಮೈನುದ್ಧೀನ್, ಸದ್ದಾಂ, ಗಿರೀಶ್ ಕಲರ್, ನಾಗೇಂದ್ರ ರೆಡ್ಡಿ, ಬೆಳ್ಳೂಡಿ ಮಂಜುನಾಥ್, ಎಸ್.ಸಿ. ಘಟಕದ ರಾಕೇಶ್, ಸುಭಾನ್ ಸಾಬ್, ಅಲ್ಪಸಂಖ್ಯಾತರ ಘಟಕದ ಅಲೆಕ್ಸಾಂಡರ್, ಕೆ. ಪರಶುರಾಮ್ ನಂದಿಗಾವಿ, ವೀರಯ್ಯ, ಸೇವಾದಳದ ಡೋಲಿ ಚಂದ್ರು, ಎಸ್.ರವಿ, ರೇವಣಪ್ಪ, ಸುರೇಶ್ ಜಾಧವ್, ಮಹ್ಮದ್ ಪಾಷಾ, ಯುವರಾಜ್ ಸೇರಿದಂತೆ ಇತರರಿದ್ದರು.

error: Content is protected !!