ದಾವಣಗೆರೆ, ಡಿ. 9- ಸ್ಮಾರ್ಟ್ ಸಿಟಿ ವತಿ ಯಿಂದ ಶಾಲಾ – ಕಾಲೇಜುಗಳಲ್ಲಿ ಅಳವಡಿಸಲಾ ಗಿರುವ ಡಿಜಿಟಲ್ ಆಧಾರಿತ ಸ್ಮಾರ್ಟ್ ತರಗತಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ಮಾಡಿ ಪರಿಶೀಲಿಸಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು, ಸ್ಮಾರ್ಟ್ ಕ್ಲಾಸ್ ವಿದ್ಯಾರ್ಥಿಗಳ ಶಿಕ್ಷಣದ ಮಟ್ಟ ಉತ್ತಮಗೊಳಿ ಸುವ ಅತ್ಯುತ್ತಮ ಮಾಧ್ಯಮವಾಗಿದೆ ಎಂದರು.
ಆಂಜನೇಯ ಬಡಾವಣೆಯ ಮಹಿಳಾ ಪದವಿ ಕಾಲೇಜು, ಐಟಿಐ ಕಾಲೇಜು, ಡಿ.ಜೆ.ವಿ. ಪ್ರೌಢಶಾಲೆ ಹಾಗೂ ಕಾವೇರಮ್ಮ ಶಾಲೆಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮುಖ್ಯ ಅಭಿಯಂತರ ಸತೀಶ್, ಐ.ಸಿ.ಟಿ. ಉಪ ಪ್ರಧಾನ ವ್ಯವಸ್ಥಾಪಕ ಕೆ.ವಿ. ಸುನೀಲ್, ವ್ಯವಸ್ಥಾಪಕ ಬಿ. ಮಾಲತೇಶ್ ಉಪಸ್ಥಿತರಿದ್ದರು.
ಸ್ಮಾರ್ಟ್ ಸಿಟಿ ವತಿಯಿಂದ ನಗರದ 61 ಶಾಲೆಗಳು ಹಾಗೂ 9 ಕಾಲೇಜುಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಆಧರಿತ ಸ್ಮಾರ್ಟ್ ತರಗತಿಗಳನ್ನು ಅಳವಡಿಸಲಾಗಿದೆ.