ದಾವಣಗೆರೆ, ಸೆ.20- ಮಹಾನಗರ ಪಾಲಿಕೆ ವ್ಯಾಪ್ತಿಯ 19ನೇ ವಾರ್ಡಿನ ಬಂಬೂಬಜಾರ್ ಚೌಡೇಶ್ವರಿ ದೇವಸ್ಥಾನದ ರಸ್ತೆ ಮತ್ತು ಎರಡೂ ಬದಿಯಲ್ಲಿ ಸಿಸಿ ಚರಂಡಿ ದೂಡಾದಿಂದ ಆಗುತ್ತಿರುವ ಕಾಮಗಾರಿಗಳನ್ನು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರು ಇಂದು ವೀಕ್ಷಿಸಿದರು. ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಿವಕುಮಾರ್, ಕಳಪೆ ಕಾಮಗಾರಿಯನ್ನು ನಡೆಸಿದ್ದಲ್ಲಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದೂಡಾ ಸದಸ್ಯರುಗಳಾದ ಗೌರಮ್ಮ ಪಾಟೀಲ್, ಮಾರುತಿರಾವ್ ಘಾಟ್ಗೆ, ಆರ್.ಲಕ್ಷ್ಮಣ, ಬಾತಿ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಕರ್, ಕಿರಿಯ ಅಭಿಯಂತರ ಕೆ.ಟಿ.ಅಕ್ಷತಾ ಅವರುಗಳು ಉಪಸ್ಥಿತರಿದ್ದರು.