ಚಿತ್ರ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಸಾಂಘಿಕ ಪ್ರಯತ್ನ ಅಗತ್ಯ

`ಅಕ್ಕ ಅಣ್ಣ ಬಣ್ಣ’ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದ ಮಂಜುನಾಥ ಸ್ವಾಮಿ

ದಾವಣಗೆರೆ, ಸೆ.26- ಶಿಕ್ಷಕ, ಕಲಾವಿದ ಶಾಂತಯ್ಯ ಪರಡಿಮಠ ಅವರ ಅವರ `ಅಕ್ಕ ಅಣ್ಣ ಬಣ್ಣ’ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ  ಭಾನುವಾರ ನಗರದ ತರಳಬಾಳು ಬಡಾವಣೆಯಲ್ಲಿರುವ ಸ್ವಸ್ತಿ ಆರ್ಟ್ ಗ್ಯಾಲರಿಯಲ್ಲಿ ಚಾಲನೆ ನೀಡಲಾಯಿತು.

ಡಿಡಿಪಿಐ ಕಚೇರಿಯ ಸರ್ವಶಿಕ್ಷಣ ಅಭಿಯಾನದ ಉಪಯೋಜನೆ ಸಮನ್ವಯ ಅಧಿಕಾರಿ ಮಂಜುನಾಥಸ್ವಾಮಿ ಮೂರು ದಿನಗಳ ಕಾಲ ನಡೆಯುವ ಈ ಚಿತ್ರ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ದಾವಣಗೆರೆಯಲ್ಲಿ ಸಾಕಷ್ಟು ಚಿತ್ರಕಲಾವಿದರಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಸಾಂಘಿಕ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಾವಣಗೆರೆ ವಿಶ್ವವಿದ್ಯಾ ನಿಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ  ಶಿವಕುಮಾರ ಕಣಸೋಗಿ, ಪತ್ರಕರ್ತ ಸದಾನಂದ ಹೆಗಡೆ, ಮಾತನಾಡಿದರು.

ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ ಎಸ್.ಚಿಗಟೇರಿ ಮಾತನಾಡಿದರು. ಇಎನ್‌ಟಿ ತಜ್ಞ ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.

ಅನುಶ್ರೀ ಬಳಗದ ಧ್ಯಾನ್, ಗಾನವಿ, ಪರಿಣಿಕ ಮತ್ತು ವಿಹಾನ್‌ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀ ಜಯ ವಿಭವ ವಿದ್ಯಾಸಂಸ್ಥೆಯ ಸದಸ್ಯ ಎಂ.ಕೆ. ಬಕ್ಕಪ್ಪ, ಸ್ವಸ್ತಿ ಆರ್ಟ್ ಗ್ಯಾಲರಿ ಮೇಲ್ವಿಚಾರಕ ರವಿ ಶ್ಯಾಮ ಹುದ್ದಾರ, ಅನುಶ್ರೀ ಸಂಗೀತ ಶಾಲೆಯ ಮೇಲ್ವಿಚಾರಕರಾದ ವೀಣಾ ಹೆಗಡೆ ಇತರರು ಉಪಸ್ಥಿತರಿದ್ದರು. ದತ್ತಾತ್ರೇಯ ಭಟ್ ನಿರೂಪಿಸಿದರು.

error: Content is protected !!