ಮಲೇಬೆನ್ನೂರು, ಡಿ. 8- ಶ್ರೀ ಗುರು ಕರಿಬಸವೇ ಶ್ವರ ಅಜ್ಜಯ್ಯನ ಪವಾಡಗಳಿಂದಾಗಿ ಸುಕ್ಷೇತ್ರವಾಗಿ ರುವ ಉಕ್ಕಡಗಾತ್ರಿ ಗ್ರಾಮದ ಸ್ಮಶಾನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಮೌಢ್ಯ ವಿರೋಧಿ ದಿನವನ್ನಾಗಿ ಆಚರಿಸಿ ಗ್ರಾಮದ ಯುವಕರು ಗಮನ ಸೆಳೆದರು.
ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ವತಿಯಿಂದ ಕಳೆದ 6 ವರ್ಷಗಳಿಂದ ಬೆಳಗಾವಿ ಸ್ಮಶಾನದಲ್ಲಿ ಡಿಸೆಂಬರ್ 6ರಂದು ಮೌಢ್ಯ ವಿರೋಧಿ ದಿನಾಚರಣೆ ಆಚರಿಸುತ್ತಿದ್ದು, ಆ ಕಾರ್ಯಕ್ರಮದಿಂದ ಪ್ರೇರಣೆಗೊಂಡಿರುವ ಗ್ರಾಮದ ಯುವಕರು, ಉಕ್ಕಡಗಾತ್ರಿಯ ಸ್ಮಶಾನಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಶಾಂತಿಧಾಮ ಎಂಬ ನಾಮಫಲಕ ಹಾಕಿದ್ದಾರೆ.
ಸ್ಮಶಾನದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೌಢ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಚಿಂತಕ ಡಾ. ಎ.ಬಿ. ರಾಮಚಂದ್ರಪ್ಪ ಅವರು ಮೂಢನಂಬಿಕೆಗಳಿಂದ ನಾವು ಹೊರ ಬರದಿದ್ದರೆ ನಮ್ಮ ಉದ್ಧಾರ ಸಾಧ್ಯವಿಲ್ಲ ಎಂದು ಜನರನ್ನು ಜಾಗೃತಿಗೊಳಿಸಿದರು.
ಮುಖಂಡ ಹೊದಿಗೆರೆ ರಮೇಶ್ ಮಾತ ನಾಡಿ, ಇಂತಹ ಕಾರ್ಯಕ್ರಮ ಪ್ರತಿ ಹಳ್ಳಿಯಲ್ಲೂ ನಡೆದಾಗ ಮಾತ್ರ ಜನರನ್ನು ಮೌಢ್ಯದಿಂದ ಹೊರತರಬಹುದೆಂದರು.
ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ ಪಟೇಲ್, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಪ್ರಗತಿಪರ ಚಿಂತಕ ಆವರಗೆರೆ ರುದ್ರಮುನಿ, ಹರಿಹರದ ಏಜಾಜ್ ಅಹ್ಮದ್, ಜಿಗಳಿಯ ಡಾ. ಎನ್. ನಾಗರಾಜ್, ಬುಳುಸಾಗರದ ಸಿದ್ದರಾಮಣ್ಣ, ನಿವೃತ್ತ ಎಸಿಎಫ್ ವೀರೇಶ್ ನಾಯ್ಕ, ಪತ್ರಕರ್ತ ಜಿಗಳಿ ಪ್ರಕಾಶ್, ಗ್ರಾ.ಪಂ. ಸದಸ್ಯ ಶಂಕ್ರಪ್ಪ ಕಮದೋಡ್ ಮಾತನಾಡಿದರು.
ಉಕ್ಕಡಗಾತ್ರಿ ಗ್ರಾ.ಪಂ. ಅಧ್ಯಕ್ಷೆ ಕರಿಬಸಮ್ಮ, ಉಪಾಧ್ಯಕ್ಷೆ ಸಾಕಮ್ಮ, ಹರಿಹರದ ಕೆ.ಬಿ. ಮಂಜುನಾಥ್, ಪಾರ್ವತಿ, ಕುಂಬಳೂರು ವಾಸು, ಮಲೇಬೆನ್ನೂರಿನ ಕೆ.ಪಿ. ಗಂಗಾಧರ್, ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯ ಶಿವಲಿಂಗಂ, ಮರಿದೇವ್, ಕಬ್ಬಾರ್ ಮಂಜುನಾಥ್, ಗ್ರಾ.ಪಂ. ಸದಸ್ಯೆ ಭಾರತಿ ಕಟಿಗೇರ್, ಮಾಜಿ ಸದಸ್ಯ ಸುರೇಶ್ ಪೂಜಾರ್, ಬಿ. ಪ್ರಕಾಶ್, ಸಿದ್ದಪ್ಪ ಶಿವಣ್ಣರ್, ಕರಿಬಸಪ್ಪ ಪೂಜಾರ್, ಸಿದ್ದೇಶ್ ಮುದೇಗೌಡ್ರು, ರವಿ ಕುಪ್ಪೇಲೂರು, ಎ.ಕೆ. ಚಂದ್ರಪ್ಪ, ಮಾನವ ಬಂಧುತ್ವ ವೇದಿಕೆಯ ಸಿದ್ದೇಶ್, ಕರಿಬಸವ, ಹನುಮಂತ, ಶಿವರಾಜ, ಮಹಾದೇವ, ಮಹೇಶ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಮಾಡಾಳ್ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಘಟಕ ಮಂಜು ದೊಡ್ಮನಿ ಸ್ವಾಗತಿಸಿದರು.