ಜಿಲ್ಲೆಯಲ್ಲಿ 4 ದಿನ ನಿಷೇಧಾಜ್ಞೆ

ಜಿಲ್ಲೆಯಲ್ಲಿ 4 ದಿನ ನಿಷೇಧಾಜ್ಞೆ - Janathavaniಪರಿಷತ್ ಚುನಾವಣೆ ಹಿನ್ನೆಲೆ: ಡಿಸಿ ಆದೇಶ

ಮದ್ಯ ಮಾರಾಟ ನಿಷೇಧ

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ  ಇಂದಿನಿಂದ ನಾಳೆ ದಿನಾಂಕ 10ರ ಸಂಜೆ 6 ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ದಾವಣಗೆರೆ ಡಿ.8-  ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಮತದಾನ ವನ್ನು ನಾಡಿದ್ದು ದಿನಾಂಕ 10 ರಂದು ನಿಗದಿಪಡಿಸಲಾಗಿದ್ದು,  ಸುಗಮ ಹಾಗು ಶಾಂತಿಯುತ ಮತದಾನಕ್ಕಾಗಿ ಇಂದಿನಿಂದ ನಾಡಿದ್ದು ದಿನಾಂಕ 10ರ ಸಂಜೆ 4 ರವರೆಗೆ  ಜಿಲ್ಲೆಯಾದ್ಯಂತ  ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಿತ ಅವಧಿಯಲ್ಲಿ ಕಾನೂನು ಬಾಹಿರ ವಾಗಿ ಗುಂಪು ಗೂಡುವುದು ಮತ್ತು ಸಾರ್ವಜನಿಕ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶದಲ್ಲಿ ತಿಳಿಸಿದ್ದಾರೆ.

ಮತದಾನ ನಡೆಯುವ ಪ್ರದೇಶದಲ್ಲಿ 5 ಜನರಿಗಿಂತ ಹೆಚ್ಚಿನ ವ್ಯಕ್ತಿಗಳು ಗುಂಪುಗೂಡಲು, ಒಟ್ಟಾಗಿ ಓಡಾಡಲು ಅನುಮತಿ ಇರುವುದಿಲ್ಲ. ಆದಾಗ್ಯೂ ಬಾಗಿಲಿನಿಂದ ಬಾಗಿಲಿಗೆ ಮತ ಯಾಚಿಸುವ ಸಲುವಾಗಿ ಮನೆಯಿಂದ ಮನೆಗೆ ಭೇಟಿ ನೀಡುವುದಕ್ಕೆ ನಿರ್ಬಂಧ ಇರುವುದಿಲ್ಲ. 

ಹೊರಗಿನ ಮತಕ್ಷೇತ್ರದಿಂದ ಕರೆತಂದ ಮತ್ತು ಈ ಕ್ಷೇತ್ರಕ್ಕೆ ಮತದಾರ ರಲ್ಲದೇ ಇರುವ ವ್ಯಕ್ತಿಗಳು ಹಾಗೂ ಮುಂತಾದ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಬಗ್ಗೆ ತೀವ್ರ ನಿಗಾ ವಹಿಸುವುದು. ಇಂತಹ ವ್ಯಕ್ತಿಗಳಿಂದ ಮತ ದಾರರ ಮೇಲೆ ಪ್ರಭಾವ ಬೀರುವ ಚಟುವಟಿಕೆಗಳು ಕಂಡುಬಂದಲ್ಲಿ ನಿಯ ಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

error: Content is protected !!