ದಾವಣಗೆರೆ, ಸೆ.15- ಹಿಂದಿ ಸಪ್ತಾಹ ವಿರೋಧಿಸಿ ಹಾಗೂ ಬ್ಯಾಂಕಿ ನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ ಕನ್ನಡದಲ್ಲಿ ಎಲ್ಲಾ ರೀತಿಯ ಸೇವೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡ ಬಣ) ಜಿಲ್ಲಾ ಸಮಿತಿಯಿಂದ ನಿನ್ನೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮುಖೇನ ಅಕ್ಕಮಹಾದೇವಿ ರಸ್ತೆಯಲ್ಲಿರುವ ಇಂಡಿಯನ್ ಬ್ಯಾಂಕ್ ಮುಂಭಾಗ ಪ್ರತಿಭಟಿಸಲಾ ಯಿತು. ನಂತರ ವಿವಿಧ ಬ್ಯಾಂಕ್ ಗಳಿಗೆ ತೆರಳಿ ಮನವಿ ಸಲ್ಲಿಸಲಾಗಿದೆ. ಅಂತೆಯೇ ಜಿಲ್ಲೆಯ 91ಕ್ಕಿಂತ ಹೆಚ್ಚು ಬ್ಯಾಂಕುಗಳ ಮುಂದೆ ಸಂಘಟನೆ ಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ.
ಭಾರತ ಒಕ್ಕೂಟ ಸರ್ಕಾರವು ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಣೆ ನಡೆಸುತ್ತಾ ಬಂದಿದೆ. ಒಕ್ಕೂಟ ಸರ್ಕಾರ ಕನ್ನಡ ದಿವಸ, ತಮಿಳು ದಿವಸ, ಬಂಗಾಳಿ ದಿವಸ, ಪಂಜಾಬಿ ದಿವಸ ಆಚರಿಸುವು ದಿಲ್ಲ. ಕೇವಲ ಹಿಂದಿ ದಿವಸವೊಂದನ್ನು ಆಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ ಹಿಂದಿಯೊಂದನ್ನೇ ಪ್ರತಿ ವರ್ಷ ಮರೆಸುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು ಅದಕ್ಕೆ ವಿಶೇಷ ಮಹತ್ವ , ಪ್ರೋತ್ಸಾಹ ನೀಡುವುದು ಅನ್ಯಾಯ. ಹಿಂದಿ ದಿವಸ ಆಚರಣೆಯ ಮೂಲಕ ಇತರೆ ಭಾರತೀಯ ಭಾಷೆಗಳನ್ನು ಕಡೆಗಣಿಸಿ ಇತರೆ ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸು ವುದು ಅಕ್ಷಮ್ಯ ಎಂದರು.
ಹಿಂದಿ ಹೇರಿಕೆಯ ಪರಿಣಾಮ ವಾಗಿ ಕೇಂದ್ರ ಸರ್ಕಾರದ ಉದ್ಯೋಗ ಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ಕರ್ನಾ ಟಕದ ಬ್ಯಾಂಕುಗಳಲ್ಲಿ ಸಿಬ್ಬಂದಿಗಳು ಬಹಳಷ್ಟು ಬಾರಿ ಕನ್ನಡದಲ್ಲಿ ಮಾತ ನಾಡುವುದಿಲ್ಲ. ಬ್ಯಾಂಕುಗಳ ಅರ್ಜಿ ನಮೂನೆಗಳು, ಚಲನ್‌ಗಳು ಹಲವು ಕಡೆಗಳಲ್ಲಿ ಕನ್ನಡದಲ್ಲಿ ಇರುವುದಿಲ್ಲ. ಇದು ಗ್ರಾಹಕರಿಗೆ ತೀವ್ರವಾದ ತೊಂದರೆಯನ್ನುಂಟು ಮಾಡುತ್ತಾ ಇದೆ ಎಂದು ಆಕ್ಷೇಪಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಸಂತೋಷ, ಧರ್ಮರಾಜ್, ಮಂಜುಳಮ್ಮ, ಶಾಂತಮ್ಮ, ರೇಖಾ, ಜ್ಯೋತಿ, ದುರ್ಗಮ್ಮ, ಮಲ್ಲಿಕಾರ್ಜುನ್, ಲೋಕೇಶ್, ಸಂತೋಷ್, ರಫೀಕ್ ಅಹ್ಮದ್, ಗೌಸ್, ಜಬಿ ಉಲ್ಲಾ, ಗೋಪಾಲ್, ದೇವರಮನೆ ಧೀರೇಂದ್ರ, ಖಾದರ್ ಭಾಷಾ, ಸಚಿನ್, ಗಿರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.