ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ

ಮಲೇಬೆನ್ನೂರು, ಸೆ.14- ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರ ಜಯಂತ್ಯೋತ್ಸವ ವನ್ನು ಶ್ರದ್ಧಾ ಭಕ್ತಿಯಿಂದ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಭಾದ್ರಪದ ಮಾಸದ ಮೊದಲ ಮಂಗಳವಾರದಂದು ಆಚರಿಸುವ ಸೃಷ್ಠಿಕರ್ತ ಸಾಕ್ಷಾತ್‌ ಪರಮೇಶ್ವರನ ಉಗ್ರರೂಪವೇ ಆಗಿರುವ ಬೆಂಕಿ ಪ್ರಿಯ ಹಾಗೂ ಗುಗ್ಗುಳ ಪ್ರಿಯ ವೀರಭದ್ರೇಶ್ವರ ಜಯಂತ್ಯೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಮಂಗಲಮೂರ್ತಿಗೆ 12 ಜನ ಪುರೋಹಿತರಿಂದ 11 ಸಾವಿರ ರುದ್ರ ಪಾರಾಯಣದ ನಂತರ ರುದ್ರಾಭಿಷೇಕ ನೆರವೇರಿಸಲಾಯಿತು.

ಮಲೇಬೆನ್ನೂರು ಪಟ್ಟಣದ ಬಸವೇಶ್ವರ, ಬೀರಲಿಂಗೇಶ್ವರ, ಜೋಡಿ ಆಂಜನೇಯ, ಶ್ರೀ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ, ದುರ್ಗಾಂಬಿಕೆ, ಕಾಳಿಕಾಂಬದೇವಿ, ಚಂದ್ರಗುತ್ತ್ಯೆಮ್ಮ  ಮತ್ತು ಕುಂಬಳೂರಿನ ಆಂಜನೇಯ ಸ್ವಾಮಿ ಬಸವೇಶ್ವರ, ಬೀರಲಿಂಗೇಶ್ವರ ದೇವರುಗಳ ಸಮ್ಮುಖದಲ್ಲಿ ಹಾಗೂ ಬೆನಕಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಪೂಜಾ  ವಿಧಿ – ವಿಧಾನಗಳು ನಡೆದವು.

error: Content is protected !!