ದಾವಣಗೆರೆ, ಸೆ.13- ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ಆಗ್ರಹಿಸಿ, ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮುಂದಾಳತ್ವದಲ್ಲಿ ಜಮಾಯಿಸಿದ್ದ ಸಂಘಟನೆಯ ಪದಾಧಿಕಾರಿಗಳು, ರೈತರು, ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ದ ಹಕ್ಕಾಗಬೇಕು. ಸರ್ಕಾರವು ಇದಕ್ಕೆಂದೇ ಕಾಯ್ದೆ ರೂಪ ಕೊಡಬೇಕು ಹಾಗೂ ರೈತರು ಬೆಳೆಯುವ 23 ಬೆಳೆಗಳಿಗೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಹುಚ್ಚವ್ವನ ಹಳ್ಳಿ ಮಂಜುನಾಥ್, ಕೇಂದ್ರ ಸರ್ಕಾರವು ಪ್ರತಿ ವರ್ಷ ರೈತರು ಬೆಳೆಯುವ 23 ಬೆಳೆ ಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಸಿಸು ತ್ತದೆ. ಅದರಲ್ಲಿ ಮೆಕ್ಕೆಜೋಳ, ಭತ್ತ, ರಾಗಿ, ಶೇಂಗಾ, ಹತ್ತಿ, ಸೂರ್ಯಕಾಂತಿ ಇವುಗಳು ಸೇರಿವೆ. ಆದರೆ, ಕೇಂದ್ರ ಸರ್ಕಾರವು ಮೆಕ್ಕೆ ಜೋಳಕ್ಕೆ 1,860 ರೂ. ಘೋಷಣೆ ಮಾಡಿ ದರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕಂಪನಿ ಖರೀದಿದಾರರು, ಖಾಸಗಿ ಖರೀದಿದಾರರು ಕೇಂದ್ರದ ಆದೇಶವನ್ನು ಧಿಕ್ಕರಿಸಿ 1,400 ರೂ. ಅಂದರೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸುತ್ತಿದ್ದು, ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಡಿಮೆ ಬೆಲೆಗೆ ಮೆಕ್ಕೆಜೋಳ ಖರೀದಿ ಮಾಡುವುದರಿಂದ ಪ್ರತಿ ಕ್ವಿಂಟಾಲ್ಗೆ 460 ರೂ. ನಷ್ಟ ಆಗುತ್ತದೆ. ಹೀಗೆ 50 ಕ್ವಿಂಟಾಲ್ ಬೆಳೆದ ರೈತನಿಗೆ ವರ್ಷಕ್ಕೆ 46 ಸಾವಿರ ನಷ್ಟವಾಗು ತ್ತದೆ. ಕಾರಣ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಜತೆ ಖರೀದಿ ಕೇಂದ್ರಗಳನ್ನು ತೆಗೆಯಬೇಕು. ಆದರೆ, ಕೇಂದ್ರ ಸರ್ಕಾರವು 2014 ರಿಂದಲೂ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆದಿಲ್ಲ. ಇದರಿಂದ ಮೆಕ್ಕೆಜೋಳ ಬೆಳೆದ ರೈತರಿಗೆ ತೀವ್ರ ನಷ್ಟವಾಗಿದೆ ಎಂದು ತಿಳಿಸಿದರು.
ಡಿಸಿ ಕಚೇರಿಗೆ ತೆರಳಲು ಪೊಲೀಸರಿಂದ ಬಸ್
ಪ್ರತಿಭಟನಾ ನಿರತರು ತಮ್ಮ ಬೈಕ್ಗಳಲ್ಲಿ ರಾಲಿ ಮುಖೇನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಮುಂದಾದ ವಿಚಾರ ಅರಿತ ಕರ್ತವ್ಯ ನಿರತ ಪೊಲೀಸರು ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಜಯದೇವ ವೃತ್ತದಲ್ಲೇ ರಾಲಿಗೆ ಅವಕಾಶ ಕೊಡಲಿಲ್ಲ. ಬದಲಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ತಾವೇ ಖಾಸಗಿ ಬಸ್ ನ ವ್ಯವಸ್ಥೆ ಕಲ್ಪಿಸಿದರು. ಬಸ್ ನಲ್ಲಿ ಬಂದ ಪ್ರತಿಭಟನಾಕಾರರು, ಜಿಲ್ಲಾಡಳಿತ ಭವನದ ಮುಂದೆ ಅಪರ ಜಿಲ್ಲಾಧಿಕಾರಿ ಪೂಜಾರ್ ಮಲ್ಲಪ್ಪ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ ರೈತರು ತಕ್ಷಣಕ್ಕೆ ಕೇಂದ್ರ ಸರ್ಕಾರದ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುತ್ತಾರೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಕನಿಷ್ಠ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾದರೆ ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡು ತ್ತಾರೆ. ಇಂತಹ ಸಂದರ್ಭವನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಘೋಷಣೆ ಮಾಡುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬದ್ಧ ಕಾಯ್ದೆಯನ್ನು ಮಾಡಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಖರೀದಿ ಮಾಡುವ ಕಂಪನಿ, ಖಾಸಗಿ ಖರೀದಿದಾರರ ಲೈಸೆನ್ಸ್ ರದ್ದು ಮಾಡಿ, ಜೈಲು ಶಿಕ್ಷೆ ಜೊತೆಗೆ ದಂಡ ಸೇರಿದಂತೆ ಉಗ್ರ ಕಾಯ್ದೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುಮ್ಮನೂರು ಬಸವ ರಾಜ್, ಜಗಳೂರು ಚಿರಂಜೀವಿ, ಕಾಡಜ್ಜಿ ಪ್ರಕಾಶ್, ದ್ಯಾಮಜ್ಜರ ಹನುಮಂತ, ಯಲೋದ ಹಳ್ಳಿ ರವಿಕುಮಾರ್, ಬೇವಿನಹಳ್ಳಿ ರವಿಕು ಮಾರ್, ಕೆಂಚಮ್ಮನಹಳ್ಳಿ ಹನುಮಂತ, ನೀ ರ್ಥಡಿ ತಿಪ್ಪೇಶ್, ಭೀಮಣ್ಣ, ಮಲ್ಲಿಕಾರ್ಜುನ , ಹನುಮಂತ, ನಾಗರಾಜ್, ಮಧುರ, ಅಣ್ಣಪ್ಪ ಸೇರಿದಂತೆ ವಿವಿಧ ರೈತರು ಪಾಲ್ಗೊಂಡಿದ್ದರು.