ಪ್ರಸನ್ನಾನಂದಪುರಿ ಶ್ರೀಗಳಿಂದ ಕಾಮಗಾರಿ ಪರಿಶೀಲನೆ
ದಾವಣಗೆರೆ, ಸೆ.8- ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿ ಯನ್ನು ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಪರಿಶೀಲಿಸಿದರು.
ಬಿ.ಟಿ. ಲೇಔಟ್ ನಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಭವನದ ಮೇಲ್ಬಾಗದಲ್ಲಿನ ವಿಶಾಲವಾದ ಹಾಲ್, ನೆಲ ಮಹಡಿ ಯಲ್ಲಿನ ಊಟದ ಸ್ಥಳ ಸೇರಿದಂತೆ, ಭವನದ ಸಂಪೂರ್ಣ ನಿರ್ಮಾಣ ಕಾಮಗಾರಿಯ ಪ್ರಗತಿ ಯನ್ನು ವೀಕ್ಷಿಸಿ ದರು. ಇದರ ಜೊತೆಯಲ್ಲೇ ಭವನ ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿ ಗಳಿಂದ ಮಾಹಿತಿ ಪಡೆದರು. ಅಲ್ಲದೇ ಸೂಕ್ತ ರೀತಿಯಲ್ಲಿ, ಗುಣಮಟ್ಟ ಕಾಯ್ದುಕೊಂಡು ಭವನ ನಿರ್ಮಿಸುವಂತೆ ಮಾರ್ಗದರ್ಶನ ನೀಡಿದರು.
ಜಿಲ್ಲಾ ಪಂಚಾಯತ್‌ನ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾ ಗಕ್ಕೆ ಭವನ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದ್ದು, ಗುತ್ತಿಗೆದಾರ ಆರ್. ವೆಂಕಟರೆಡ್ಡಿ ಅವರಿಗೆ ಟೆಂಡರ್ ನೀಡಲಾಗಿದೆ. ಒಟ್ಟು 10 ಕೋಟಿ ವೆಚ್ಚ ದಲ್ಲಿ ಈ ಭವನ ನಿರ್ಮಾಣವಾಗುತ್ತಿದ್ದು, ಇದೀಗ ಸದ್ಯಕ್ಕೆ 4.90 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಈಗಾಗಲೇ 3.30 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪಂಚಾಯತ್ ನ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ವೆಂಕಟೇಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ, ಮಾಜಿ ಶಾಸಕ ಹೊದಿಗೆರೆ ರಮೇಶ್, ಮುಖಂಡುಗಳಾದ ಹದಡಿ ಹಾಲಪ್ಪ, ಹುಲಿಕಟ್ಟೆ ಶಿವಣ್ಣ, ಶ್ಯಾಗಲೆ ಮಂಜುನಾಥ್, ನಾಗರಾಜ್ ಬೆಳವ ನೂರು, ಮಲ್ಲಾಪುರ ದೇವರಾಜ್, ಆರನೇಕಲ್ಲು ಹನುಮಂತಪ್ಪ, ಅಣ್ಣಾಪುರ ಹೇಮಣ್ಣ, ಜಯಣ್ಣ ಸೋಮಲಾಪುರ, ಕುರ್ಕಿ ಪರ್ವತಪ್ಪ, ಮಳ ಲ್ಕೆರೆ ಚಂದ್ರಪ್ಪ, ಸಹಾಯಕ ಅಭಿಯಂತರ ರವಿ ಪ್ರಕಾಶ್, ಕಾರ್ಯಪಾಲಕ ಅಭಿಯಂತರ ಜಿ. ಪರಮೇಶ್ವರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಕಿರಿಯ ಅಭಿಯಂತರ ರಾದ ನಾಗರಾಜ್, ಸೂರಪ್ಪ ಸೇರಿದಂತೆ ಸಮಾಜದ ಮುಖಂಡರು, ಅಧಿಕಾರಿಗಳು ಇದ್ದರು.