ಭಾರತೀಯರು ಭಾವನೆಗಳ ಆಧಾರದ ಮೇಲೆ ಜೀವನ ನಡೆಸುತ್ತಾರೆ

ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿನ ಶಿಕ್ಷಕರ ವಿಶೇಷ ಕಾರ್ಯಾಗಾರದಲ್ಲಿ ಡಾ. ಎ.ಹೆಚ್. ಶಿವಯೋಗಿಸ್ವಾಮಿ

ದಾವಣಗೆರೆ, ಸೆ. 6- ಭಾರತೀಯರು ಭಾವನೆಗಳ ಆಧಾರದ ಮೇಲೆ ಜೀವನ ನಡೆಸುತ್ತಾರೆ. ಆದರೆ ವಿದೇಶದಲ್ಲಿ ಇವುಗಳನ್ನು ಕಾಣಲು ಅಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ತಿಳಿಸಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಭಾರತೀಯ ವಿದ್ಯಾಭಾರತಿ ಸಂಘಟನೆಯ ಸಹಯೋಗದಲ್ಲಿ ಮೊನ್ನೆ ಆಯೋಜಿಸಿದ್ದ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮರಳಿ ಜ್ಞಾನ ದೇಗುಲಕ್ಕೆ ಬರುತ್ತಿರುವ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಸ್ವಾಗತಿಸಲು ಶಾಲಾ ಆಡಳಿತ ಮಂಡಳಿ ಈ ವಿಶೇಷ ಕಾರ್ಯಾಗಾರ ಆಯೋಜಿಸಿದ್ದು, ಕಾರ್ಯಾಗಾರದ ಜೊತೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕರಿಗೆ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಗೌರಿ ಹಬ್ಬದ ವಿಶೇಷ ಉಡುಗೊರೆ ನೀಡುವ ಮೂಲಕ ಭಾರತೀಯರು ಸಂಪ್ರದಾಯಗಳಲ್ಲಿ ಹಕ್ಕುಗಳಿಗಿಂತ ಜವಾಬ್ದಾರಿ ಅರಿತು ನಡೆಯುತ್ತಾರೆ ಎಂದು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗ ಳೂರಿನ ವಿದ್ಯಾಭಾರತಿ ಸಂಘಟನಾ ಕಾರ್ಯ ದರ್ಶಿ  ಉಮೇಶ್‍ಕುಮಾರ್‍, ವಿದ್ಯಾಭಾರತಿ ಸಂಘಟನಾ ಕ್ಷೇತ್ರೀಯ ಕಾರ್ಯದರ್ಶಿ  ಜಗದೀಶ್ ಅವರುಗಳು ಮಾತನಾಡಿದರು. 

ಶಾಲೆ ಸಾಮಾಜಿಕ ಪರಿವರ್ತನಾ ಕೇಂದ್ರವಾಗಬೇಕು, ಕಲಿಕಾರ್ಥಿ  ಅರಿಷಡ್ವರ್ಗಗಳನ್ನು ಮೆಟ್ಟಿನಿಲ್ಲಬೇಕು, ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಭಕ್ತಿಯೇ ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯುತ್ತದೆ ಹಾಗಾಗಿ ವೃತ್ತಿ ಧರ್ಮವನ್ನು ಬೆಳೆಸಿಕೊಳ್ಳೋಣ ಎಂದು ಜಗದೀಶ್ ಹಿತ ನುಡಿದರು.

ಶಾಲೆಯ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!