ರಸಪ್ರಶ್ನೆ ಸ್ಪರ್ಧೆ : ಎಸ್ಸೆಸ್‌ ವೈದ್ಯಕೀಯ ಕಾಲೇಜಿಗೆ ಬಹುಮಾನಗಳ ಸುರಿಮಳೆ

ದಾವಣಗೆರೆ, ಸೆ. 2 – ನಗರದ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪದವಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇತ್ತೀಚಿಗೆ ನಡೆದ ವಿವಿಧ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಮೊದಲನೇ ಸ್ಥಾನ ಗಳಿಸಿ ವಿಜೇತರಾಗಿದ್ದಾರೆ.

ಭಾರತೀಯ ಮನೋವೈದ್ಯಶಾಸ್ತ್ರ ಸೊಸೈಟಿ ದಕ್ಷಿಣ ವಲಯದಿಂದ ಮನೋ ವೈದ್ಯಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿಗಳಿ ಗಾಗಿ ಆಯೋಜಿಸಿದ್ದ ಡಾ. ಎಸ್.ಎಂ. ಚನ್ನಬಸವಣ್ಣ ಸ್ಪಂದನ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಡಾ. ಸುಪ್ರೀತಾ ಮತ್ತು ಡಾ. ಪಿ.ಎಸ್.  ವೈಭವಿ ಅವರನ್ನೊಳಗೊಂಡ ತಂಡವು ಮೊದಲನೇ ಸ್ಥಾನ ಪಡೆದಿದೆ.  

ಎರಡು ಹಂತಗಳಲ್ಲಿ ನಡೆದಿದ್ದ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ವಿವಿಧ ಮೆಡಿಕಲ್ ಕಾಲೇಜುಗಳ 83 ತಂಡಗಳು ಭಾಗವಹಿಸಿದ್ದವು. ಈ ತಂಡವು ಎರಡು ಹಂತಗಳಲ್ಲಿಯೂ ಮೊದಲನೇ ಸ್ಥಾನ ಪಡೆದಿರುವುದು ಗಮನಾರ್ಹ.

ಡಾ. ಸುಪ್ರೀತಾ, ಮನೋವೈದ್ಯಶಾಸ್ತ್ರ ವಿಭಾಗದ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ಭಾರತೀಯ ಮನೋವೈದ್ಯಕೀಯ ಸೊಸೈಟಿ  ರಾಷ್ಟ್ರೀಯ ಮಧ್ಯಂತರ ಸಿಎಂಇ – 2021ರ ಅಂಗವಾಗಿ ನವದೆಹಲಿಯಲ್ಲಿ ಇತ್ತೀಚಿಗೆ ಅಯೋಜಿಸಿದ್ದ ರಾಷ್ಟ್ರೀಯ  ಮಟ್ಟದ ಸ್ನಾತಕೋತ್ತರ ರಸಪ್ರಶ್ನೆಯಲ್ಲಿ ಭಾಗವಹಿಸಿ ಮೊದಲನೇ ಸ್ಥಾನದಲ್ಲಿ ವಿಜೇತರಾಗಿದ್ದಾರೆ.

 ಭಾರತೀಯ ಮನೋವೈದ್ಯಕೀಯ ಸೊಸೈಟಿ – ಕರ್ನಾಟಕ ಅಧ್ಯಾಯ (ಐಪಿಎಸ್ – ಕೆಸಿ) ವೈದ್ಯಕೀಯ ಪದವಿಪೂರ್ವ (ಎಂಬಿಬಿಎಸ್) ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಮನೋವೈದ್ಯಕೀಯ ರಸಪ್ರಶ್ನೆ-2021 ಸ್ಪರ್ಧೆಯಲ್ಲಿ ಕಾಲೇಜಿನ ದ್ವಿತೀಯ ವರ್ಷದ ಎಂ ತೇಜಸ್ ಹಾಗೂ ಆಸ್ಪಿಯ (ತಂಡವಾಗಿ) ಮೊದಲನೇ ಸ್ಥಾನ ಪಡೆದಿದ್ದಾರೆ. 

ಇದೇ ದಿನಾಂಕ 18 ಮತ್ತು 19 ರಂದು ಮಂಗಳೂರಿನಲ್ಲಿ ಏರ್ಪಾಡಾಗಿರುವ ಐಪಿಎಸ್ – ಪಿಸಿ, ಕೆಎಎನ್ ಸಿಐಪಿಎಸ್ – 2021 ಸಮ್ಮೇಳನದಲ್ಲಿ ವಿಜೇತರು ಪ್ರಮಾಣ ಪತ್ರ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ.

ಈ ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳೂ ಆದ  ಶಾಸಕ ಡಾ. ಶಾಮನೂರು ಶಿವಶಂಕರಪ್ಪ,  ಕಾಲೇಜಿನ ಛೇರ್ಮನ್‌ ಶಾಮನೂರು ಮಲ್ಲಿಕಾರ್ಜುನ್‌ ಅಭಿನಂದಿಸಿದ್ದಾರೆ. 

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎಸ್. ಪ್ರಸಾದ್, ಉಪ ಪ್ರಾಂಶುಪಾಲ ರಾದ ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ, ಡಾ. ಎ. ಅರುಣಕುಮಾರ್, ವೈದ್ಯಕೀಯ ನಿರ್ದೇಶಕರಾದ ಡಾ. ಎನ್.ಕೆ. ಕಾಳಪ್ಪನವರ್  ಅವರುಗಳು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಮನೋವೈದ್ಯಕೀಯ ವಿಭಾಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ರಾದ ಡಾ. ವಿನೋದ್ ಜಿ. ಕುಲಕರ್ಣಿ, ಸಹ ಪ್ರಾಧ್ಯಾಪಕರಾದ ಡಾ. ಎಚ್.ಎಲ್. ಶಶಿಧರ, ಡಾ. ಎನ್ ಮೃತ್ಯುಂಜಯ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಹೆಚ್.ಎನ್. ಆಶಾ ಅವರುಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

error: Content is protected !!