ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ
ಹರಿಹರ, ಆ.31- ಇಂದು ನೆಟ್ಟಿರುವ ಸಸಿ, ಬೆಳೆದು ಮುಂದೆ ಮರವಾಗಿ, ನೆರಳು, ಗಾಳಿ, ಫಲ ಕೊಟ್ಟಾಗ ಅದರ ನೆನಪು ಚಿರಕಾಲ ಉಳಿಯುತ್ತದೆ. ಜೊತೆಗೆ ಸಸಿ ಹಾಕಿದವರ ಹೆಸರು ಉಳಿಯುತ್ತದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು.
ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯು ತಾಲ್ಲೂಕು ಆಡಳಿತದ ಸಹಕಾರದೊಂದಿಗೆ, ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲ್ಲೂಕು ಕಚೇರಿ ಆವರ ಣದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಡಂಬರದ ಕಾರ್ಯಕ್ರಮಗಳನ್ನು ಮಾಡುವು ದಕ್ಕಿಂತ, ಜನರಿಗೆ ಹಾಗೂ ಪರಿಸರಕ್ಕೆ ಉಪಯೋಗ ವಾಗುವ ಸಸಿ ನೆಡುವುದು, ಆರೋಗ್ಯ ಶಿಬಿರ, ರಕ್ತದಾನ, ನೇತ್ರದಾನಗಳಂತಹ ಕಾರ್ಯಕ್ರಮಗಳನ್ನು ಮಾಡುವುದು ಅತ್ಯುತ್ತಮ ಎಂದರು.
ಸಸಿ ನೆಡುವ ಕಾರ್ಯ ಕ್ರಮದ ಪೂರ್ವದಲ್ಲಿ ಸಮಾನ ಮನಸ್ಕರ ಕಚೇರಿ ಯಲ್ಲಿ ತಾಲ್ಲೂಕು ಆಡಳಿತದ ಸಭಾಂಗಣದಲ್ಲಿ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಯಾದವ ಸಮಾಜದ ಅಧ್ಯಕ್ಷ ಎಲ್. ಬಸಪ್ಪ ಹಾಗೂ ವೇದಿಕೆಯ ಅಧ್ಯಕ್ಷ ಜಿ.ಹೆಚ್. ಮರಿಯೋಜಿರಾವ್, ಗೌರವಾಧ್ಯಕ್ಷ ಹೆಚ್.ಕೆ. ಕೊಟ್ರಪ್ಪ, ಪ್ರಧಾನ ಕಾರ್ಯದರ್ಶಿ ವೈ. ಕೃಷ್ಣಮೂರ್ತಿ, ವೇದಿಕೆಯ ಪದಾಧಿಕಾರಿಗಳಾದ ಕೆಂಚನಹಳ್ಳಿ ಮಹಾಂತೇಶಪ್ಪ, ಗುಂಡೇರಿ ಚಂದ್ರಶೇಖರಪ್ಪ, ಎಂ.ಹೆಚ್. ಭೀಮಪ್ಪ, ಸಿ. ಹನುಮಂತಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಎಚ್. ಬಿ. ಮಾಲತೇಶ್, ಸಾರಥಿ ಎಲ್.ಎಚ್. ಹನುಮನಗೌಡ, ಭದ್ರಪ್ಪ, ಮಧುಸೂದನ್, ಶಾಂತಮ್ಮ , ಎಲ್.ಆರ್. ಪ್ರಸನ್ನ , ಎಲ್.ವಿ. ಕೃಷ್ಣ , ಎಲ್. ವಿ. ಮಂಜುನಾಥ್, ಎಲ್.ಬಿ. ಪ್ರದೀಪ್, ಗಂಗಾಧರ್ ಮತ್ತು ಇತರರರಿದ್ದರು.