ಗಾಂಧಿ ಭವನ ಉದ್ಘಾಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಕಡೆಗಣನೆ

ಗಾಂಧಿ ಭವನ ಉದ್ಘಾಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಕಡೆಗಣನೆ - Janathavaniದಾವಣಗೆರೆ, ಆ. 31- ಇದೇ ಸೆ.2 ರಂದು  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಉದ್ಘಾಟಿಸಲಿರುವ ನಗರದ ಗಾಂಧಿ ಭವನ ಕಾರ್ಯಕ್ರಮಕ್ಕೆ ತಮ್ಮನ್ನು ಕಡೆಗಣನೆ ಮಾಡಿರುವುದು ನೋವಿನ ಸಂಗತಿ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಉಳ್ಳೇರ ಮರುಳಸಿದ್ದಪ್ಪ ಹೇಳಿದ್ದಾರೆ.

ಭಾರತ ಸರ್ಕಾರ ರಚಿಸಿರುವ ಎಮಿನೆಂಟ್ ಕಮಿಟಿಯಲ್ಲಿ 26 ರಾಜ್ಯಗಳ ಪೈಕಿ 9 ಜನ ಸದಸ್ಯರು ಆಯ್ಕೆಯಾಗಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಉಳ್ಳೇರ ಮರುಳಸಿದ್ದಪ್ಪ ಅವರು, ಭಾರತದ ಪ್ರತಿನಿಧಿಯೂ ಹೌದು. 

2019ರಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಮರುಳಸಿದ್ದಪ್ಪ ಅವರನ್ನು ಸನ್ಮಾನಿಸಿ, ಗೌರವಿಸಿದ್ದರು. ಮರುಳಿಸಿದ್ದಪ್ಪ ಅವರು ಸ್ವಾತಂತ್ರ್ಯ ಯೋಧರು ಮತ್ತು ಉತ್ತರಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರೂ ಆಗಿದ್ದಾರೆ. 

ಮಹಾತ್ಮ ಗಾಂಧೀಜಿ ಅನುಯಾಯಿಗಳಿಗೂ, ಸ್ವಾತಂತ್ರ್ಯ ಹೋರಾಟಗಾರರಿಗೂ ಅವಿನಾಭಾವ ಸಂಬಂಧವಿದೆ. ಸುಮಾರು 40 ವರ್ಷಗಳಿಂದ ಗಾಂಧಿ ಭವನ ನಿರ್ಮಾ ಣಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ ಗಾಂಧಿ ಭವನ ನಿರ್ಮಾಣ ಮಾಡಿ, ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಸೌಜನ್ಯಾಕ್ಕಾದರೂ ಮಾಹಿತಿ ತಿಳಿಸದೆ, ಉದ್ಘಾಟನೆಗೂ ಕರೆ ಯದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಮರುಳಸಿದ್ದಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

error: Content is protected !!