ದಾವಣಗೆರೆ,ಆ.29- ಜಿಲ್ಲಾ ತೆರಿಗೆ ಸಲಹೆಗಾರರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಜಂಬಗಿ ರಾಧೇಶ್ ಅವರ ನೇತೃತ್ವದ ತಂಡಕ್ಕೆ ಅತ್ಯಧಿಕ 17 ಸ್ಥಾನಗಳು ಲಭಿಸಿದ್ದು, ಮತ್ತೊಂದು ಅವಧಿಗೆ ಪುನರಾಯ್ಕೆಗೊಂಡಿದ್ದಾರೆ.
ಜಂಬಿಗಿ ರಾಧೇಶ್ ತಂಡದ ಬಿ.ಜಿ. ಬಸವರಾಜಪ್ಪ, ಡಿ.ಎಂ. ರೇವಣ್ಣ ಸಿದ್ದಯ್ಯ, ಸಿ. ವಿನಯ್, ಜಿ.ಎಸ್ ಜಗದೀಶ್, ಹೆಚ್.ಎಸ್. ಮಂಜುನಾಥ್, ಸುಬ್ರಮಣ್ಯ, ಕುಮಾರಸ್ವಾಮಿ, ಬಿ. ವಿನಯಕುಮಾರ್, ನಾಗರಾಜ ರಾವ್, ಕೆ.ಎಸ್. ವೀರಣ್ಣ, ರವಿಕುಮಾರ್, ಕೆ.ಎಂ. ಬಕ್ಕೇಶ್, ಮುಸ್ತಫಾ, ರುದ್ರಸ್ವಾಮಿ, ಲೋಕೇಶ್, ಜಿ.ಮಹಾಂತೇಶ್ ಅವರುಗಳು ಪುನರಾಯ್ಕೆಯಾಗಿದ್ದಾರೆ.
ನಗರದ ಶ್ರೀ ಜಯದೇವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ನಡೆದ ಈ ಚುನಾವಣೆಯನ್ನು ವಕೀಲ ಹೆಚ್.ವಿ. ಸುರೇಶ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಜಂಬಿಗಿ ರಾಧೇಶ್, ಬರುವ 3 ತಿಂಗಳು ವರ್ಚ್ಯುಲ್ ವೆಬಿನಾರ್ ಮತ್ತು ತೆರಿಗೆ ಸಲಹೆಗಾರರರಿಗೆ ಹೆಚ್ಚಿನ ಅನುಕೂಲತೆಗಳನ್ನು ಮಾಡಿಕೊಡಲು ತಮ್ಮ ತಂಡ ಬದ್ಧವಾಗಿದೆ ಎಂದು ತಿಳಿಸಿದರು.
ಹರಿಹರದ ಸುಬ್ರಮಣ್ಯ ಸ್ವಾಗತಿಸಿದರು. ಸಂಘದ ವರದಿಯನ್ನು ರೇವಣಸಿದ್ದಯ್ಯ ಓದಿದರು. ಲೆಕ್ಕ ಪತ್ರವನ್ನು ಖಜಾಂಚಿ ಜಿ.ಎಸ್.ಜಗದೀಶ್ ಮಂಡಿಸಿದರು. ಸಿ. ವಿನಯ್ ವಂದಿಸಿದರು.