ಮಲೇಬೆನ್ನೂರಿನಲ್ಲಿ ಹೆದ್ದಾರಿಗೆ ಬ್ಯಾರಿಕೇಡ್ ಅಳವಡಿಕೆ

ಮಲೇಬೆನ್ನೂರು, ನ.25- ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಎದುರು ಇರುವ ಸರ್ಕಾರಿ ಉರ್ದು ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೆದ್ದಾರಿ ದಾಟಲು ಅನುಕೂಲವಾಗುವಂತೆ ಪೊಲೀಸರು 4 ಬ್ಯಾರಿಕೇಡ್‌ ವ್ಯವಸ್ಥೆ ಮಾಡಿದ್ದಾರೆ.

2 ಶಾಲೆಗಳ ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಹೆದ್ದಾರಿಗೆ ಬ್ಯಾರಿಕೇಡ್ ಹಾಕಿ ರಸ್ತೆ ಸುರಕ್ಷತಾ ಕ್ರಮ ವಹಿಸುವಂತೆ ಪತ್ರದ ಮೂಲಕ ಇಲ್ಲಿನ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಪಿಎಸ್ಐ ರವಿಕುಮಾರ್ ಹಾಗೂ ಪ್ರೊಬೇಷನರಿ ಪಿಎಸ್ಐ ಪಾಂಡುರಂಗ ಅವರು ಗುರುವಾರ ಬೆಳಿಗ್ಗೆ ಶಾಲೆ ಪ್ರಾರಂಭಕ್ಕೂ ಮೊದಲು ಹೆದ್ದಾರಿಗೆ ಬ್ಯಾರಿಕೇಡ್ ಹಾಕಿ ವಾಹನಗಳ ವೇಗವನ್ನು ನಿಯಂತ್ರಣಗೊಳಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟರು.

ಇದಕ್ಕಾಗಿ ಶ್ರಮಿಸಿದ ಉದ್ಯಮಿ ಸೈಯದ್ ರೋಷನ್ ಮತ್ತು ಪ್ರೊಬೇಷನರಿ ಪಿಎಸ್ಐ ಪಾಂಡುರಂಗ ಅವರನ್ನು ಸರ್ಕಾರಿ ಉರ್ದು ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ವತಿಯಿಂದ ಸನ್ಮಾನಿಸಿ, ಅಭಿನಂದಿಸಿದರು.

ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸೈಯದ್ ಸಾಬೀರ್ ಅಲಿ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬರ್ಕತ್ ಅಲಿ,
ಸರ್ಕಾರಿ ಪ.ಪೂ. ಕಾಲೇಜಿನ ಎಸ್‌ಬಿಸಿ
ಉಪಾಧ್ಯಕ್ಷ ಮೀರ್ ಆಜಂ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ರಾಜೇಶ್ವರಿ, ಹಿರಿಯ ಶಿಕ್ಷಕ ರೇವಣಸಿದ್ದಪ್ಪ ಅಂಗಡಿ, ಬಸವಾಪಟ್ಟಣದ ಶಿಕ್ಷಕ ಹಾಗೂ ಕನ್ನಡಪರ ಯುವ ಚಿಂತಕ ಎಲ್.ಜಿ.ಮಧುಕುಮಾರ್, ಚನ್ನಗಿರಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಇಜಾಜ್ ಅಹಮದ್ ಮತ್ತು ಕುಂಬಳೂರು ವಾಸು ಈ ವೇಳೆ ಹಾಜರಿದ್ದರು.

error: Content is protected !!