ಹರಪನಹಳ್ಳಿ ತಾಲ್ಲೂಕಿಗೆ 16 ಕೋಟಿ ರೂ. ಮಂಜೂರು

ಶಾಸಕ ಕರುಣಾಕರ ರೆಡ್ಡಿ

ಹರಪನಹಳ್ಳಿ, ಆ.25-  ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ  ಹರಪನಹಳ್ಳಿ ತಾಲ್ಲೂಕಿಗೆ 16 ಕೋಟಿ ರೂ. ಮಂಜೂರಾಗಿದೆ ಎಂದು  ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ತಾಲ್ಲೂಕಿನ ಹುಣಿಸಿಹಳ್ಳಿಯಲ್ಲಿ 1.9 ಕೋಟಿ ರೂ. ಸಿಸಿ ರಸ್ತೆ, ಅರೆಮಜ್ಜಿಗೇರಿಯಲ್ಲಿ 1ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ.  ಪಟ್ಟಣದ ಜೆ.ಸಿ. ವೃತ್ತದಿಂದ  ತಾಯಮ್ಮನ ಹುಣಸೆಮರದವರೆಗೆ 1.5 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ,  ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 6 ಕೊಠಡಿಗಳಿಗೆ 1ಕೋಟಿ ರೂ. ವೆಚ್ಚದಲ್ಲಿ ಭೂಮಿ ಪೂಜೆ, ಪಟ್ಟಣದ ಹಮಾಲರಿಗೆ ಆಹಾರ ಕಿಟ್ ಹಾಗೂ ತಾಲ್ಲೂಕಿನ ಯಡಿಹಳ್ಳಿ ಮತ್ತು ನೀಲ ಗುಂದ  ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಕಟ್ಟಡ ಕಾರ್ಮಿಕರಿಗೆ   ಆಹಾರ ಕಿಟ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾ ಡಿದರು.

 ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಂಜೂರಾದ 16 ಕೋಟಿ ರೂಪಾಯಿ ಹಣದಲ್ಲಿ ಶಾಲಾ ಕೊಠಡಿಗಳು. ವಸತಿ ನಿಲಯಗಳು, ಡಾಂಬರ್ ರಸ್ತೆ, ಸಿಸಿ ರಸ್ತೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಎಂದರು.

 ಕೊರೊನಾ 3 ನೇ ಅಲೆ ನಿಭಾಯಿಸಲು 73 ಲಕ್ಷ ಹಣ ಮಂಜೂರಾಗಿದ್ದು, ಅದರಲ್ಲಿ ಆಸ್ಪತ್ರೆಗೆ ಬೇಕಾದ  10 ಐಸಿಯು,  ಮಕ್ಕಳ  ಹಾಸಿಗೆ, ವೆಂಟಿ ಲೇಟರ್, ಇಸಿಜಿ, ಮಲ್ಟಿ ಟ್ರಿಪ್ ಸೇರಿದಂತೆ ವಿವಿಧ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಸೂಚಿಸಲಾಗಿದೆ ಎಂದರು.

 ತಾಲ್ಲೂಕಿನ ಬಹು ನಿರೀಕ್ಷಿತ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ನದಿ ತುಂಬಿರುವುದರಿಂದ ಸ್ಥಗಿತಗೊಂಡಿದೆ. ನದಿ ನೀರು ಕಡಿಮೆಯಾದ ಕೂಡಲೇ ಪುನಃ ಆರಂಭವಾಗುತ್ತದೆ ಎಂದ ಅವರು, ತಾಲ್ಲೂಕಿನ ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಕಾರ್ಯದಲ್ಲಿ ಪೈಪ್‌ಲೈನ್ ಕೆಲಸವಾಗಿದೆ. ಗುತ್ತಿಗೆದಾರರಾದ ಎಲ್ ಅಂಡ್ ಟಿ ಕಂಪನಿಯವರು ಎಲ್ಲಿ ಇದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಅವರು ಹೇಳಿದರು.

ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್‌,  ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಕಾರ್ಯದರ್ಶಿ ಆರ್. ಲೋಕೇಶ್‌,  ಪುರಸಭೆ ಸದಸ್ಯರುಗಳಾದ ಕಿರಣ್‌ಕುಮಾರ್‌ ಶಾನಭೋಗ, ತಾರಾ ಹನುಮಂತಪ್ಪ,  ದ್ಯಾಮಜ್ಜಿ ರೊಕ್ಕಪ್ಪ, ಮುಖಂಡರಾದ ಶಿರಗನಹಳ್ಳಿ ವಿಶ್ವನಾಥ್‌, ಎಂ.ಪಿ. ನಾಯ್ಕ್, ಮೆಡಿಕಲ್ ಶಾಪ್ ತಿಮ್ಮಣ್ಣ, ಗುಂಡಿ ಮಂಜುನಾಥ, ರಾಘವೇಂದ್ರ ಶೆಟ್ಟಿ, ಎಂ. ಸಂತೋಷ್‌, ಯು.ಪಿ.ನಾಗರಾಜ, ಸಿಪಿಐ ನಾಗರಾಜ ಎಂ. ಕಮ್ಮಾರ, ಪಿಎಸ್‍ಐ ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ  ಯರಗುಡಿ ಶಿವಕುಮಾರ್‌,  ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ
ಡಾ. ಎಂ.ಕೆ. ದುರುಗಪ್ಪ ಇನ್ನಿತರರಿದ್ದರು.

error: Content is protected !!