ಕನ್ನಡ ನಾಡಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಬೇಕು

ರೆಡ್‌ಕ್ರಾಸ್‌ನಿಂದ ವಿಕಲಚೇತನರಿಗೆ  ಫುಡ್‍ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಬಾತಿ ಶಂಕರ್

ದಾವಣಗೆರೆ, ನ. 23- ಕನ್ನಡ ನಾಡು – ನುಡಿ – ನೆಲ – ಜಲಕ್ಕಾಗಿ ಶ್ರಮಿಸಿದ ಮಹನೀಯರನ್ನು ನಾವುಗಳು ಪ್ರತಿನಿತ್ಯ ಸ್ಮರಿಸಬೇಕು ಎಂದು ಬಾತಿ ಶಂಕರ್ ತಿಳಿಸಿದರು.

ನಗರದ ಸಿರಿಗನ್ನಡ ವಿಕಲಚೇತನರ ಸೇವಾ ಚಾರಿಟೆಬಲ್ ಟ್ರಸ್ಟ್ ಕಚೇರಿಯಲ್ಲಿ ನಿನ್ನೆ ಏರ್ಪಾಡಾಗಿದ್ದ 66ನೇ ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ರಾಜ್‍ಕುಮಾರ್‍ರವರಿಗೆ ಪುಷ್ಪ ನಮನ ಹಾಗೂ ರೆಡ್‍ಕ್ರಾಸ್ ಸಂಸ್ಥೆಯಿಂದ ಬಡ ವಿಕಲಚೇತನರಿಗೆ ಫುಡ್‍ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಳ ವ್ಯಕ್ತಿತ್ವದ ಪುನೀತ್ ರಾಜ್‍ಕುಮಾರ್ ಅವರು  ಅನಾಥಾಶ್ರಮ, ವೃದ್ಧಾಶ್ರಮ, ಹೆಣ್ಣು ಮಕ್ಕಳ ಶಕ್ತಿ ಕೇಂದ್ರ, ಗೋಶಾಲೆ, ವಿಕಲಚೇತನರಿಗೆ, ಬಡವರಿಗೆ ಸಹಾಯ ಮಾಡುವುದರ ಮೂಲಕ ನಿಸ್ವಾರ್ಥ ಸಮಾಜ ಸೇವೆ ಸಲ್ಲಿಸುತ್ತಿದ್ದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಫುಡ್‍ಕಿಟ್ ವಿತರಣೆ ಜೊತೆಗೆ ರೆಡ್‍ಕ್ರಾಸ್ ಸಂಸ್ಥೆಯ ಡಿ.ಎಸ್. ಸಿದ್ದಣ್ಣನವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ಬಡ ವಿಕಲಚೇತನರಿಗೆ 200 ರೂ.ಗಳ ಧನ ಸಹಾಯ ಮಾಡಿದರು. 

ಈ ಸಂದರ್ಭದಲ್ಲಿ ಕನ್ನಡ ಕೇಂದ್ರ ಚಳುವಳಿ ಅಧ್ಯಕ್ಷ ಟಿ.ಶಿವಕುಮಾರ್, ಟ್ರಸ್ಟ್‍ನ ರಾಜ್ಯಾಧ್ಯಕ್ಷ ಟಿ.ವೆಂಕಟೇಶ್ ಕಣ್ಣಾಳರ್, ಪ್ರಕಾಶ್, ಕಿರಣ್‍ಕು ಮಾರ್ ಹುಲ್ಲುಮನಿ, ರೆಡ್‍ಕ್ರಾಸ್ ಸಂಸ್ಥೆಯ ಗೌಡ್ರು ಚನ್ನಬಸಪ್ಪ, ಡಿ.ಎಸ್. ಸಿದ್ದಣ್ಣ, ಡಿ.ಎಸ್.ಸಾಗರ್, ಪೃಥ್ವಿರಾಜ್ ಬಾದಾಮಿ, ಮಧುಕೇಶ್ವರ, ಜಗನ್ ಕಾಸಲ್, ನರೇಂದ್ರ, ಪ್ರಕಾಶ್, ರವಿಕುಮಾರ್, ಬಸವರಾಜ ಗುಡುಮೇರ್, ಟಿ.ಅಜ್ಜೇಶಿ, ಮುದ್ದಯ್ಯ, ಜಿ.ರಾಜೇಶ್ವರಿ ಅಂಜಿನಪ್ಪ, ಹೊನ್ನಮ್ಮ, ಪರಶುರಾಮ, ಜಿ.ಮೀರಾ ರವಿಕುಮಾರ್, ನಟರಾಜ್ ಎಲ್., ಚಮನ್ ಷಾ, ಕಮಲಮ್ಮ, ಶ್ರೀರಾಮುಲು, ನಾಗರಾಜ್ ಕಾರದಪುಡಿ, ನೀಲಿಬಾಯಿ, ಬಸವ ರಾಜ್ ಆಚಾರ್, ಕಲ್ಲೇಶಪ್ಪ, ವೃಷಭೇಂದ್ರಚಾರ್, ಶಿವರಾಜ್ ಬಿ.ಎಂ. ಉಪಸ್ಥಿತರಿದ್ದರು.

error: Content is protected !!