ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿದ ಅರಸು

ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ

ಹರಿಹರ, ಆ.20-  ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಸಾಮಾಜಿಕ ಮತ್ತು ಜನಪರವಾದ ನ್ಯಾಯದ ಹರಿಕಾರರು ಎಂದು ಸಾರ್ವಜನಿಕರಿಂದ ಪ್ರಶಂಸಿಸಲ್ಪಟ್ಟಿದ್ದರು ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಹೇಳಿದರು.

ನಗರದ ತಹಶೀಲ್ದಾರರ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ  ಇಂದು ಏರ್ಪಾಡಾಗಿದ್ದ ಡಿ.ದೇವರಾಜ ಅರಸ್‌ರವರ 106 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ದೇವರಾಜ ಅರಸು ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 

ಸಾಮಾಜಿಕವಾಗಿ ಸಮಾನತೆ ತರುವ ಉದ್ದೇಶದಿಂದ ಸಾಮಾಜಿಕ, ಆರ್ಥಿಕ ಸುಧಾರಣೆಗೆ ತಮ್ಮದೇ ಶೈಲಿಯಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಅವರ ಆಳ್ವಿಕೆಯಲ್ಲಿ ಉಳುವವನೇ ಒಡೆಯ, ಋಣಮುಕ್ತ ಕಾಯಿದೆ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದರು. ಸಮಾಜದಲ್ಲಿರುವ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ರಾಜಕೀಯ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹೆಚ್ಚು ಅವ ಕಾಶ ದೊರೆಯುವಂತೆ ಗಮನ ಹರಿಸಿದ್ದ ಅವರ ಆದರ್ಶ ಮೌಲ್ಯಗಳನ್ನು ಇಂದಿನ ಯುವಕರು ಪಾಲಿಸಬೇಕು ಎಂದು ಕರೆ ನೀಡಿದರು. 

ಗ್ರೇಡ್-2 ಬಿ.ಎಂ.ಶಶಿಧರಯ್ಯ ಮಾತನಾಡಿ, ರಾಜ್ಯದ ಧೀಮಂತ ಮುಖ್ಯಮಂತ್ರಿಯಾಗಿದ್ದ ಅರಸುರವರು ಸಣ್ಣ ರೈತರಿಗೆ ವಿಶೇಷ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾವನೂರು ವರದಿಯನ್ನು ಜಾರಿ ಗೊಳಿಸಿ, ಜೊತೆಯಲ್ಲಿ ಮೈಸೂರು ರಾಜ್ಯವಾಗಿದ್ದ ನಮ್ಮ ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಯುವಕರು ಯಾವಾಗಲೂ ಚಟುವಟಿಕೆಯಿಂದಿರುವಂತೆ ಪ್ರೇರಣೆ ಆಗಬೇಕೆಂಬ ಬಯಕೆ ಹೊಂದಿದ್ದ ಅವರು, ಯುವಕರ ಅಭ್ಯುದಯಕ್ಕೆ ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತಿದ್ದರು. ಸಂವಿಧಾನವನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿದವರಾಗಿ ಕೆಲವು ಕಾನೂನುಗಳನ್ನು ಜಾರಿಗೆ ತಂದು ಯಶಸ್ಸು ಕಂಡರು ಎಂದು ಹೇಳಿದರು. 

ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ, ಮಲೇಬೆನ್ನೂರು ಉಪತಹಶೀಲ್ದಾರ್ ರವಿ ಮಾತನಾಡಿದರು.

ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಜಿ.ಎಚ್.ಮರಿಯೋಜಿರಾವ್, ಭಾಜಪ ಮುಖಂಡ ಕೆಂಚನಹಳ್ಳಿ ಮಹಾಂ ತೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನುಸ್ರತ್ ಪರ್ವೀನ್, ಹನುಮಂತ ಪಾಟೀಲ್, ಬಿ.ಮುಗ್ದುಂ, ರಂಗನಾಥ್, ಸಮಾಜ ಕಲ್ಯಾಣ ಅಧಿಕಾರಿ ನಾಸೀರ್ ಹುಸೇನ್, ಶಿರಸ್ತೇದಾರ್ ಸುನಿತಾ, ರಾಜಸ್ವ ನಿರೀಕ್ಷಕ ಆನಂದ್, ಸಿಬ್ಬಂದಿಗಳಾದ ಸಂತೋಷ್, ಸಂಗೀತ ಜೋಷಿ, ಪುಷ್ಪಾ, ಸೌಮ್ಯ, ಸುವರ್ಣ, ಮಂಜುಳಾ, ನರಸಮ್ಮ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಸಮಾನ ಮನಸ್ಕರು ಹಾಜರಿದ್ದರು.

error: Content is protected !!