ರಸ್ತೆಯಲ್ಲಿ ನಾಟಿ ಮಾಡಿ ಪ್ರತಿಭಟನೆ

ದಾವಣಗೆರೆ, ಆ. 19- ಗುಂಡಿಗಳೇ ತುಂಬಿದ್ದ  ರಸ್ತೆಯಲ್ಲಿ  ಭತ್ತದ ಸಸಿ ನಾಟಿ ಮಾಡುವ ಮೂಲಕ ಇಲ್ಲಿನ ಎಸ್.ಎಸ್. ಬಡಾವಣೆ ನಾಗರಿಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಎಸ್. ಬಡಾವಣೆ ಎ ಬ್ಲಾಕ್ 1ನೇ ಮುಖ್ಯ ರಸ್ತೆಯಿಂದ 13ನೇ ಮುಖ್ಯ ರಸ್ತೆವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು,  ಶಾಮನೂರು ರಸ್ತೆಯಿಂದ ಬಾಪೂಜಿ ಎಂಬಿಎ ಫಾರ್ಮಸಿ, ಅಥಣಿ ಕಾಲೇಜಿಗೆ ಹಾದು ಹೋಗಲು ಇದು ಮುಖ್ಯರಸ್ತೆಯಾಗಿದೆ. 

ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಹರಸಾಹಸ ಪಡುತ್ತಿದ್ದಾರೆ. ಮಕ್ಕಳು ಹಾಗೂ ವಯೋವೃದ್ದರೂ ಸಹ ಅನೇಕ ಬಾರಿ ರಸ್ತೆಯಲ್ಲಿ ಬಿದ್ದು ಕೈ-ಕಾಲು ಗಾಯ ಮಾಡಿಕೊಂಡ ನಿದರ್ಶನಗಳಿವೆ. ಕಳೆದ 3-4 ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಮುದೇಗೌಡ್ರ ರಾಜಶೇಖರಪ್ಪ, ಹೇಮಗಿರಿಯಪ್ಪ, ಎಸ್.ವೀರಭದ್ರಪ್ಪ, ಶಿವಕುಮಾರ್, ವೈ.ರೇವಣ್ಣ, ಡಾ.ಅಪೂರ್ ಧನಂಜಯ, ವೇಣು ಗೋಪಾಲ್, ದಿಲೀಪ್, ಅಂಗಡಿ ಮಂಜು, ಅಜ್ಜಪ್ಪ, ಜಗದೀಶ್, ಮಾರುತಿ, ಅಲ್ಲಮ ಪ್ರಭು, ಸಚಿನ್, ರಾಜಣ್ಣ, ವೆಂಕಟೇಶ್, ಪ್ರವೀಣ್ ಇತರರು ಇದ್ದರು.

error: Content is protected !!