ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಬಿ.ವಾಮದೇವಪ್ಪ ಆಯ್ಕೆ

ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಬಿ.ವಾಮದೇವಪ್ಪ ಆಯ್ಕೆ - Janathavaniಪ್ರತಿ ಸ್ಪರ್ಧಿ ಶಿವಕುಮಾರಸ್ವಾಮಿ ಕುರ್ಕಿ ವಿರುದ್ಧ 3026 ಮತಗಳ ಅಂತರದಿಂದ ಗೆಲುವು

ದಾವಣಗೆರೆ, ನ.21- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಬಿ. ವಾಮದೇವಪ್ಪ ಗೆಲುವಿನ ನಗೆ ಬೀರಿದರು.

ತಮ್ಮ ಪ್ರತಿಸ್ಪರ್ಧಿ ಶಿವಕುಮಾರ ಸ್ವಾಮಿ ಕುರ್ಕಿ ವಿರುದ್ಧ ಬಿ. ವಾಮದೇವಪ್ಪ 3026 ಅಂತರದಿಂದ ಜಯ ಗಳಿಸಿದ್ದಾರೆ. ಬಿ. ವಾಮದೇವಪ್ಪ ಅವರು 3920 ಮತಗಳನ್ನು ಪಡೆದಿದ್ದು, ಶಿವಕುಮಾರಸ್ವಾಮಿ ಕುರ್ಕಿ 894 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನ ಆರು ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1993 ಮತಗಳನ್ನು ವಾಮದೇವಪ್ಪ ಪಡೆದಿದ್ದಾರೆ. ಪ್ರತಿ ಸ್ಪರ್ಧಿ ಶಿವಕುಮಾರ ಸ್ವಾಮಿ ಕುರ್ಕಿ 320 ಮತಗಳನ್ನು ಪಡೆದಿದ್ದಾರೆ.

ವಾಮದೇವಪ್ಪ ಅವರು ಕಸಾಪ ಜಿಲ್ಲಾಧ್ಯಕ್ಷರಾಗಿ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು, ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ಶೇ.45.50ರಷ್ಟು ಮತದಾನ: ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಮತ್ತು ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಜಿಲ್ಲೆಯಲ್ಲಿ ಇಂದು 15 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಜಿಲ್ಲಾ ಕಸಾಪದಲ್ಲಿ 10,850 ಮತದಾರರಿದ್ದು, 4934 ಜನರು ಮತ ಚಲಾಯಿಸಿದ್ದರು. ಶೇ.45.50ರಷ್ಟು ಮತದಾನ ಆಗಿತ್ತು. 120 ತಿರಸ್ಕೃತ ಮತಗಳಾಗಿವೆ.

ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್  ಬಿ.ಎನ್. ಗಿರೀಶ್ ಅವರು  ಫಲಿತಾಂಶದ ಮಾಹಿತಿ ನೀಡಿದರು. 

ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿರುವ ಶಾಲೆಯ ಐದು ಮತಗಟ್ಟೆಗಳಲ್ಲಿ ಮತ್ತು ಲೋಕಿಕೆರೆಯ ಮಾರುತಿ ಸರ್ಕಾರಿ ಪ್ರೌಢಶಾಲೆ, ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, ಹರಿಹರದ ಗಾಂಧಿ ಮೈದಾನದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆ. ಚನ್ನಗಿರಿಯ ತಾಲ್ಲೂಕು ಕಚೇರಿ, ಸಂತೆಬೆನ್ನೂರಿನ ನಾಡ ಕಚೇರಿ ಮತ್ತು ಬಸವಾಪಟ್ಟಣದ ನಾಡ ಕಚೇರಿ, ಹೊನ್ನಾಳಿಯ ತಾಲ್ಲೂಕು ಕಚೇರಿ ಸಭಾಂಗಣ, ಸಾಸ್ವೆಹಳ್ಳಿಯ ನಾಡಾ ಕಚೇರಿ ಹಾಗೂ ಜಗಳೂರಿನ ತಾಲ್ಲೂಕು ಕಚೇರಿ ಮತ್ತು ನ್ಯಾಮತಿಯ ತಾಲ್ಲೂಕು ಕಚೇರಿಯಲ್ಲಿ ಮತದಾನ ನಡೆಯಿತು.

ಗಣ್ಯರ ಹಕ್ಕು ಚಲಾವಣೆ : ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಹಿರಿಯ ಸಾಹಿತಿಗಳಾದ ಡಾ. ಎಂ.ಜಿ.ಈಶ್ವರಪ್ಪ, ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ, ಎ.ಆರ್. ಉಜ್ಜಿನಪ್ಪ,  ಬಾ.ಮ. ಬಸವರಾಜಯ್ಯ, ವಕೀಲ ಎಲ್.ಹೆಚ್. ಅರುಣ್ ಕುಮಾರ್ ಸೇರಿದಂತೆ ಪ್ರಮುಖರು ಮತ ಚಲಾವಣೆ ಮಾಡಿದರು.

error: Content is protected !!