ಹರಪನಹಳ್ಳಿ : ಸ್ವಾತಂತ್ರ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ಹೆಚ್.ಜಿ. ಚಂದ್ರಶೇಖರಯ್ಯ
ಹರಪನಹಳ್ಳಿ, ಆ.15- ಕೋವಿಡ್ 1ನೇ ಮತ್ತು 2ನೇ ಅಲೆಯಿಂದ ಜನಸಾಮಾನ್ಯರ ಜೀವನ ದುಸ್ತರವಾಗಿದ್ದು, ಸಾವಿರಾರು ಸಂಖ್ಯೆ ಯಲ್ಲಿ ಜನರು ಪ್ರಾಣ ಕಳೆದು ಕೊಂಡಿದ್ದು, 3ನೇ ಅಲೆ ಆರಂಭದಲ್ಲಿ ಕೋವಿಡ್ ಹೊಡೆದೋ ಡಿಸಲು ಶಾಸಕ ಕರುಣಾಕರ ರೆಡ್ಡಿ ಅವರು, ತಮ್ಮ ಅನುದಾನದಲ್ಲಿ 72 ಲಕ್ಷ ಹಣ ಬಿಡುಗಡೆ ಮಾಡಿದ್ದು, ವೆಂಟಿಲೇಟರ್, ಬೆಡ್, ವೈದ್ಯಕೀಯ ಸಲಕರಣೆಗಳನ್ನು ಖರೀದಿ ಸೇರಿದಂತೆ, ಆಸ್ಪ ತ್ರೆಯ ಸೌಲಭ್ಯಗಳ ವಿಸ್ತರಿಸಲು ಬಳಿಸಿಕೊಳ್ಳ ಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಹೆಚ್.ಜಿ. ಚಂದ್ರಶೇಖರಯ್ಯ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಇಂದು ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕೊರೊನಾ ತಡೆಗಟ್ಟುವಲ್ಲಿ ಶಾಸಕರು, ಅಧಿಕಾರಿಗಳು, ಮಾಧ್ಯಮದವರು ಸಾಕಷ್ಟು ಶ್ರಮಿಸಿದ್ದಾರೆ. ಎಲ್ಲರ ಸಹಕಾರದಿಂದ
ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ. ಪ್ರತಿಯೊಬ್ಬರೂ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಡಿವೈಎಸ್ಪಿ ವಿ.ಎಸ್. ಹಾಲುಮೂರ್ತಿರಾವ್ ಮಾತನಾಡಿ, ರೈತರೇ ಈ ದೇಶದ ಬೆನ್ನಲು ಬಾಗಿದ್ದು, ಕೋವಿಡ್ 1 ಮತ್ತು 2ನೇ ಹಾಗೂ 3ನೇ ಅಲೆಯಲ್ಲಿ ರೈತರ ಬೆಳೆಗಳನ್ನು ಮಾರಲು ಕೋವಿಡ್ ನಿಯಮಗಳನ್ನು ಸರಳೀಕರಣ ಮಾಡಿ, ಈ ಸರ್ಕಾರ ರೈತರ ಪರವಾಗಿದೆ ಎಂದು ಸಾಬೀತು ಮಾಡಲಾಗಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತಕರ್ ಮಾತನಾಡಿ, ಶಾಂತಿ, ತ್ಯಾಗ, ಬಲಿದಾನಗಳ ಮೂಲಕ ದೇಶ ಎಲ್ಲಾ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಭಾರತ ಎಲ್ಲಾ ನೋವು, ನಲಿವುಗಳನ್ನೊಳಗೊಂಡ ಪುಣ್ಯಭೂಮಿಯಾಗಿದೆ. ಆದರೆ, ಈಚೆಗೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ದುಃಖದ ಸಂಗತಿ. ಇದು ಹೆಣ್ಣಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.
ಪುರಸಭೆ ಉಪಾಧ್ಯಕ್ಷ ನಿಟ್ಟೂರು ಭೀಮವ್ವ, ತಹಶೀಲ್ದಾರ್ ನಂದೀಶ್ ಎಲ್.ಎಂ, ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಯರಗುಡಿ ಶಿವಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ ವೀರಭದ್ರಯ್ಯ, ವಲಯ ಅರಣ್ಯಾಧಿಕಾರಿ ಭರತ್ ಡಿ.ತಳವಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜು ನಾಥ ಗೊಂದಿ, ನೌಕರರ ಸಂಘದ ಅಧ್ಯಕ್ಷ ಕೆ.ಸಿದ್ದಲಿಂಗನಗೌಡ, ಸಮಾಜ ಕಲ್ಯಾಣ ಅಧಿ ಕಾರಿ ಆನಂದ ಯು. ಡೊಳ್ಳಿನ, ಪುರಸಭೆ ಸದಸ್ಯ ಜಾಕೀರ್ ಹುಸೇನ್, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ್, ಸಿಪಿಐ ನಾಗರಾಜ ಕಮ್ಮಾರ, ಪಿಎಸ್‍ಐ ಸಿ. ಪ್ರಕಾಶ್, ತಾಲ್ಲೂಕು ಆರೋಗ್ಯಾಧಿಕಾರಿ ದೇವರಾಜ್, ಮೀನುಗಾರಿಕೆ ಇಲಾಖೆಯ ಮಂಜುಳಾ ಆರ್.ಐ, ಎಸ್ ಅರವಿಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.