ಪರಿಶ್ರಮ, ಸರಳತೆ ಇದ್ದರೆ ಸಾಧಕರಾಗಬಹುದು

ಮಲೇಬೆನ್ನೂರು, ನ.15- ಪಟ್ಟಣದ ರಾಕ್ ಕ್ರಿಕೆಟರ್ ವತಿಯಿಂದ ನಟ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯ ಅಂಗವಾಗಿ ಇಲ್ಲಿನ ಬಸವೇಶ್ವರ ಬಡಾವಣೆಯ ಬನ್ನಿ ಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಮಿನಿ ಬೌಂಡರಿ ಕ್ರಿಕೆಟ್ ಟೂರ್ನಿಯಲ್ಲಿ ಗುತ್ತೂರಿನ ಫಾರ್ ಯು ತಂಡವು ಪ್ರಥಮ ಬಹುಮಾನ ಪಡೆದುಕೊಂಡಿತು.

ಟೂರ್ನಿಯ ಸಮಾರೋಪ ಸಮಾರಂ ಭದಲ್ಲಿ ಬಿ.ಜೆ.ಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ನಟ ಪುನೀತ್ ರಾಜ್ ಕುಮಾರ್ ಅವರ ಸದ್ದಿಲ್ಲದ ಸೇವೆ ಎಲ್ಲರ ಮನ ಗೆದ್ದಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಜೀವನದಲ್ಲಿ ಪರಿ ಶ್ರಮ ಹಾಗೂ ಸರಳತೆ ಇದ್ದರೆ ನಾವೆಲ್ಲರೂ ಪುನೀತ್ ಅವರಂತೆ ಸಾಧಕರಾಗಬಹು ದೆಂದು ಯುವಕರನ್ನು ಹುರಿದುಂಬಿಸಿದರು.

ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಅವರು ವಿಜೇತ ತಂಡಗಳನ್ನು ಅಭಿನಂದಿಸಿ ಮಾತನಾಡಿ, ಬರೀ ಕ್ರಿಕೆಟ್ ಅಷ್ಟೇ ಅಲ್ಲ, ಗ್ರಾಮೀಣ ಕ್ರೀಡೆ, ಜಾನಪದ ಕಲೆಗಳಿಗೆ ಒತ್ತು ಕೊಡಿ ಎಂದು ಯುವಕರಿಗೆ ತಿಳಿಸಿದರು.

ಪ್ರಥಮ ಬಹುಮಾನಕ್ಕೆ ಆಯ್ಕೆಯಾದ ಗುತ್ತೂರಿನ ಫಾರ್ ಯು ತಂಡಕ್ಕೆ ಚಂದ್ರಶೇಖರ್ ಪೂಜಾರ್ ಅವರು 20 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಪಿ ಮತ್ತು ದ್ವಿತೀಯ ಬಹುಮಾನಕ್ಕೆ ಆಯ್ಕೆಯಾದ ರಾಕ್ ಕ್ರಿಕೆಟರ್ ತಂಡಕ್ಕೆ ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ಬಿ. ಮಂಜುನಾಥ್ ಅವರು 10 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಅಭಿನಂದಿಸಿದರು. ತೃತೀಯ ಬಹುಮಾನ ವನ್ನು ದಾವಣಗೆರೆಯ ವಿಷ್ಣು ಫ್ರೆಂಡ್ಸ್ ತಂಡಕ್ಕೆ ಜಿಗಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಹೆಚ್. ಎಸ್ ರುದ್ರಯ್ಯ ಅವರು ಬಹುಮಾನ ಹಾಗೂ ಆರ್ಷಕ ಟ್ರೋಫಿ ವಿತರಿಸಿದರು.

ಪುರಸಭೆ ನಾಮಿನಿ ಸದಸ್ಯ ಪಿ.ಆರ್ ರಾಜು, ಎ.ಕೆ. ಲೋಕೇಶ್, ಆಶ್ರಯ ಸಮಿತಿ ಸದಸ್ಯ ಬಿ.ಚಂದ್ರಪ್ಪ, ಎಲ್ಐಸಿ ಏಜೆಂಟ್ ಬಸಾಪುರದ ನಾಗರಾಜ್, ನಂದಿ ಪೇಂಟ್ಸ್ ಅನಿಲ್, ಹನುಮಗೌಡ, ಡಾ.ದಾಸೋಹ ಮಠ್, ಯುವ ಮುಖಂಡ  ನಿರಂಜನ್, ರಾಕ್ ಕ್ರಿಕೆಟ್‌ನ ಸಂಜು, ಆಕಾಶ, ಕಾರ್ತಿಕ್, ವೀರೇಶ್, ಮನೋಜ್, ಮುರುಗೇಶ್, ಗಂಗಾಧರ್, ಮಂಜು, ಅಭಿಷೇಕ್, ಕಿರಣ್, ಅಭಿ, ರಾಕೇಶ್ ಮತ್ತಿತರರು ಹಾಜರಿದ್ದರು.

error: Content is protected !!