ರಾಣೇಬೆನ್ನೂರಿನ ಮ್ಯಾಕ್ಸ್ ವ್ಯಾಲ್ಯೂ ಕ್ರೆಡಿಟ್ಸ್ ಮತ್ತು ಇನ್ವೆಸ್ಟ್‌ಮೆಂಟ್ ವಾರ್ಷಿಕೋತ್ಸವದಲ್ಲಿ ಶ್ರೀಗಳು
ರಾಣೇಬೆನ್ನೂರು, ನ.15- ಸಾರ್ವ ಜನಿಕರು ಸರಿಯಾದ ಸಹಕಾರ ನೀಡಿದರೆ ಬ್ಯಾಂಕುಗಳು, ಸಹಕಾರ ಸಂಘಗಳು, ಖಾಸಗಿ ವ್ಯವಹಾರ ಕೇಂದ್ರಗಳು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹಿರೇಮಠ ಶನೈಶ್ಚರ ಮಂದಿರದ ಶ್ರೀ ಶಿವಯೋಗಿ ಮಹಾಸ್ವಾಮೀಜಿ ಹೇಳಿದರು.
ನಗರದ ಪಂಪಾಪತಿ ಕಟ್ಟಡದಲ್ಲಿರುವ ಮ್ಯಾಕ್ಸ್ ವ್ಯಾಲ್ಯೂ ಕ್ರೆಡಿಟ್ಸ್ ಮತ್ತು ಇನ್ವೆಸ್ಟ್ ಮೆಂಟ್ ಕಂಪನಿಯ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ, ಮಧ್ಯಮ ವರ್ಗ, ಶ್ರೀಮಂತ ಜನರ ಅನುಕೂಲಕ್ಕೆ ಇಂದು ಸಾವಿರಾರು ಬ್ಯಾಂಕುಗಳು ಸಾಲದ ಮೂಲಕ ನೆರವಾಗುತ್ತಿವೆ. ಅಂತಹ ಬ್ಯಾಂಕುಗಳು ಸಾಕಷ್ಟು ಪ್ರಗತಿ ಸಾಧಿಸ ಬೇಕಾದರೆ ನಮ್ಮ ವ್ಯವಹಾರ ಸರಿಯಾಗಿ ಇರಬೇಕು. ತೆಗೆದು ಕೊಂಡ ಸಾಲವನ್ನು ದುಡಿದು ವಾಪಸ್ ನೀಡುವಂತಹ ಮನೋ ಭಾವನೆ ನಮ್ಮಲ್ಲಿ ಬರಬೇಕು ಎಂದು ಗ್ರಾಹಕರಿಗೆ ಕಿವಿಮಾತು ಹೇಳಿದರು. ಸಂಸ್ಥೆ ಹಾಗೂ ಕಂಪನಿಗಳನ್ನು ಯಾರಾದರೂ ಹುಟ್ಟು ಹಾಕಬಹುದು. ಆದರೆ ಅವುಗಳನ್ನು ನಡೆಸಿಕೊಂಡು ಹೋಗುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕ ಚಂದ್ರಶೇಖರಯ್ಯ ಕುಂದ ಗೋಳಮಠ, ಸಂತೋಷ ಚೌಡಪ್ಪಳವರ, ಮಾರುತಿ ಲಚ್ಚಣ್ಣನವರ, ಬಸವರಾಜ ಹಿರೇಮಠ, ಕರವೇ ಜಿಲ್ಲಾಧ್ಯಕ್ಷ ಭೀಮಪ್ಪ ಗೋಣಿಬಸಮ್ಮನವರ, ಗುರುರಾಜ ಗೋಜನೂರ, ಅಲೀಮ್ ಖಾನ್, ಯೋಗರಾಜ್ ನಾಯ್ಡು ಸೇರಿದಂತೆ ಬ್ಯಾಂಕಿನ ಗ್ರಾಹಕರು ಹಾಜರಿದ್ದರು.