ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ತಂಡಕ್ಕೆ ಸ್ವರ್ಣ ಪದಕ

ಹರಿಹರ, ಆ.11- ಕಳೆದ ವಾರ ನಡೆದ 4ನೇ ರಾಷ್ಟ್ರೀಯ ಚಾಂಪಿಯನ್ ಶಿಪ್, 2021-22 ರಲ್ಲಿ ಸಪ್ತರ್ಷಿ ಯೋಗ ಕೇಂದ್ರದ ಯೋಗ ಪಟುಗಳು ಕರ್ನಾಟಕ ರಾಜ್ಯ ತಂಡದಿಂದ ಭಾಗವಹಿಸಿ, ಕರ್ನಾಟಕ ರಾಜ್ಯಕ್ಕೆ ಪ್ರಥಮ ಬಹುಮಾನ ಗಳಿಸಿ ಕೊಟ್ಟಿದ್ದಾರೆ.

ಪಂಜಾಬ್ ಅಮೃತಸರ್ ನ ಶಾಸ್ತ್ರಿ ನಗರದ ಗುರುತೇಜ್ ಬಹದ್ದೂರ್ ನಿವಾಸದಲ್ಲಿ ಯೂತ್ ಅಂಡ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಅಸೋಸಿಯೇಷನ್
ಆಫ್ ಇಂಡಿಯಾ ಆಯೋಜನೆ ಮಾಡಿದ್ದ 4ನೇ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ದಾವಣಗೆರೆ ಜಿಲ್ಲೆಯ ಸಪ್ತರ್ಷಿ ಯೋಗ ಕೇಂದ್ರದ ಯೋಗ ಪಟುಗಳು 8 ಚಿನ್ನದ ಪದಕ, 3 ಬೆಳ್ಳಿ ಪದಕ ಮತ್ತು 1 ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಬರುವ ಸೆಪ್ಟಂಬರ್ ತಿಂಗಳಿನಲ್ಲಿ ನೇಪಾಳದಲ್ಲಿ ನಡೆಯುವ  ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಯೋಗಪಟುಗಳು ಆಯ್ಕೆಯಾಗಿದ್ದಾರೆ.ಸ್ಪರ್ಧೆಯಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳು :  8 ವರ್ಷದ ಬಾಲಕಿಯರ ವಿಭಾಗದಲ್ಲಿ ಪ್ರಾರ್ಥನಾ ಎಂ. ಪ್ರಥಮ ಸ್ವರ್ಣಪದಕ, 12 ವರ್ಷದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಸ್ವರ್ಣ ಪದಕವನ್ನು ಎಂ.ಪ್ರೇರಣಾ ಮತ್ತು ಶ್ರೇಯ ಶಿವಪೂಜಿ ಟೈ ಆದ ಹಿನ್ನೆಲೆಯಲ್ಲಿ ಪ್ರಥಮ ಸ್ಥಾನ ಸ್ವರ್ಣಪದಕ ಹಂಚಿಕೊಂಡರು.ದ್ವಿತೀಯ ಸ್ಥಾನ ಎಂ.ಚೇತನಾ  ಬೆಳ್ಳಿ ಪದಕ, 16 ವರ್ಷದ ಬಾಲಕಿಯರ ವಿಭಾಗದಲ್ಲಿ ಟಿ.ಆರ್. ಕಲ್ಲೇಶ್ವರಿ ಪ್ರಥಮ ಸ್ಥಾನ ಸ್ವರ್ಣಪದಕ, ಮೀನಾಕ್ಷಿ .ವಿ. ದ್ವಿತೀಯ ಸ್ಥಾನ ಬೆಳ್ಳಿ ಪದಕ, ಕೆ.ಎನ್. ಭುವನಾ ತೃತೀಯ ಸ್ಥಾನ ಕಂಚಿನ ಪದಕ. 

* 12 ವರ್ಷದ ಬಾಲಕರ ವಿಭಾಗದಲ್ಲಿ ಕೆ.ವಿ.ಶ್ರೀ ಅಭಯ ಪ್ರಥಮ ಸ್ಥಾನ ಸ್ವರ್ಣಪದಕ  * 16 ವರ್ಷದ ಬಾಲಕರ ವಿಭಾಗದಲ್ಲಿ ಗುರುಪ್ರಸಾದ್  ಡಿ.ಎಸ್. ಪ್ರಥಮ ಸ್ಥಾನ ಸ್ವರ್ಣಪದಕ,  * 30 ರ ಪುರುಷರ ವಿಭಾಗದಲ್ಲಿ ಸಂಜು ವಿ. ಬೆಳ್ಳಿಕುಪ್ಪಿ ಪ್ರಥಮ ಸ್ಥಾನ ಸ್ವರ್ಣ ಪದಕ, ಶ್ರೀಧರ ಮೊರಬದ ದ್ವಿತೀಯ ಸ್ಥಾನ ಬೆಳ್ಳಿ ಪದಕ, 40 ರ ಪುರುಷರ ವಿಭಾಗದಲ್ಲಿ ಉಮೇಶ್ ದ್ವಿತೀಯ ಸ್ಥಾನ ಬೆಳ್ಳಿ ಪದಕ,  * 50 ರ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಡಾ|| ಕೆ. ಜೈಮುನಿ ಪ್ರಥಮ ಸ್ಥಾನ ಸ್ವರ್ಣ ಪದಕವನ್ನು ಗಳಿಸಿದ್ದಾರೆ. 

error: Content is protected !!