ಮಹಿಳೆಯರಿಂದ ಭಾರತೀಯ ಸಂಸ್ಕೃತಿ ಜೀವಂತ

ರಂಭಾಪುರಿ ಶ್ರೀ

ರಂಭಾಪುರಿ ಪೀಠ (ಬಾಳೆಹೊನ್ನೂರು), ಮಾ.28- ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ. ಧರ್ಮ, ಸಂಸ್ಕೃತಿ, ಪರಂಪರೆ, ಆಚರಣೆಗಳು ಮಹಿಳೆ ಯರಿಂದಲೇ ಉಳಿದು, ಬೆಳೆದುಕೊಂಡು ಬಂದಿವೆ. ಸಂಸ್ಕೃತಿ ಜೀವಂತಿಕೆಗೆ ಅವರ ಕೊಡುಗೆ ಹಿರಿದಾದುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ‘ಧರ್ಮ ಮತ್ತು ಮಹಿಳೆ’ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ತಾಯಿ ಎಂಬ ಎರಡಕ್ಷರದಲ್ಲಿ ಏನೆಲ್ಲವೂ ಅಡಗಿದೆ. ಮಾತೃ ದೇವೋ ಭವ ಎಂದು ಗೌರವಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಉತ್ಕೃಷ್ಟ ಸ್ಥಾನ ಮಹಿಳೆಯರಿಗೆ ಕೊಟ್ಟಿದ್ದಾರೆ. ವೀರಶೈವ ಧರ್ಮದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಕಲ್ಪಿಸಿಕೊಟ್ಟಿದ್ದಾರೆ. ಹೆತ್ತ ತಾಯಿ, ಹೊತ್ತ ಭೂಮಿ ಇವೆರಡನ್ನೂ ಎಂದಿಗೂ ಮರೆಯಲಾಗದು ಎಂದರು.

‘ಕಾಯಕ ಯೋಗಿ ವೀರ ಗಂಗಾಧರ ಜಗದ್ಗುರುಗಳು’ ಎಂಬ ಕೃತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟ ಕದ ಅಧ್ಯಕ್ಷೆ ಬಿ.ವೈ ಅರುಣಾದೇವಿ ಬಿಡುಗಡೆ ಮಾಡಿ, ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ನಮ್ಮೆಲ್ಲರ ದೈವವಾಗಿ ಪೂಜೆ ಗೊಳ್ಳುತ್ತಿದ್ದಾರೆ. ಅವರ ತಪಶ್ಯಕ್ತಿ, ದೂರದೃಷ್ಟಿ. ಬೋಧಿಸಿದ ವಿಚಾರ ಧಾರೆಗಳು ನಮ್ಮೆಲ್ಲರ ಬಾಳಿಗೆ ನಂದಾದೀಪ ಎಂದು ಹೇಳಿದರು.

ಡಾ. ಪಂಡಿತಾರಾಧ್ಯ ವಿರಚಿತ ‘ಶಿವಾರಾಧನಾ ಪ್ರದೀಪಿಕಾ’ ಕೃತಿಯನ್ನು ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ ಬಿಡುಗಡೆ ಮಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬುಜಾ, ಗ್ರಾ.ಪಂ. ಸದಸ್ಯ ಮಹೇಶ ಆಚಾರ್, ಬೆಂಗಳೂ ರಿನ ನಾಗರತ್ನ, ಮಂಜುಳಾ, ನೇತ್ರಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ದೇವಾಪುರ-ಬಬಲಾದ್ (ಎಸ್) ಹಿರೇಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. 

ಲಕ್ಷ್ಮೇಶ್ವರದ ಡಾ.ಜಯಶ್ರೀ ಮಲ್ಲಿಕಾ ರ್ಜುನ ಹೊಸಮನಿ ‘ಮಹಿಳೆಯರಿಂದ ಧರ್ಮ ಸಂಸ್ಕೃತಿ ಬೆಳವಣಿಗೆ’ ವಿಷಯವಾಗಿ ಉಪನ್ಯಾಸ ನೀಡಿದರು.ಹೊನ್ನಕಿರಣಗಿ ಚಂದ್ರಗುಂಡ ಶ್ರೀ, ಪಡಸಾವಳಿ-ಉದಗೀರದ ಡಾ|| ಶಂಭುಲಿಂಗ ಶ್ರೀ, ಜವಳಿ ಗಂಗಾಧರ ಶ್ರೀ, ಹರಿಹರದ ಕೊಟ್ರಮ್ಮ ತೋಟಪ್ಪ ಕೊಂಡಜ್ಜಿ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು. ಗುರುಲಿಂಗಯ್ಯ ಹಿತ್ತಲಶಿರೂರ, ಶಿವಮೊಗ್ಗದ ಶಾಂತಾ ಆನಂದ ಭಕ್ತಿಗೀತೆ ಹಾಡಿದರು. ಹುಬ್ಬಳ್ಳಿಯ ಪ್ರಕಾಶ್ ಬೆಂಡಿಗೇರಿ ಸ್ವಾಗತಿಸಿದರು. ಮೈಸೂರಿನ ಟಿ.ಹೆಚ್. ರೇಣುಕಾ ಪ್ರಸಾದ್ ನಿರೂಪಿಸಿದರು. 

ಬೆಳಿಗ್ಗೆ ವಸಂತೋತ್ಸವ ಜರುಗಿತು.

error: Content is protected !!