ಮಲೇಬೆನ್ನೂರು, ಆ.6- ಕೊರೊನಾ 3ನೇ ಅಲೆ ಹರಡುವ ಭೀತಿಯಿಂದಾಗಿ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಸರ್ಕಾರದ ನಿರ್ದೇಶನದಂತೆ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದುಗೆ ದರ್ಶನ ಶನಿವಾರ ಮತ್ತು ಭಾನುವಾರ ಇರುವುದಿಲ್ಲ ಎಂದು ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಹೊರತು ಪಡಿಸಿ, ಉಳಿದ ದಿನಗಳಲ್ಲಿ ಗದ್ದುಗೆ ದರ್ಶನಕ್ಕೆ ಮಾತ್ರ ಅವಕಾಶ ಇರುತ್ತದೆ. ತೀರ್ಥ, ಪ್ರಸಾದ, ವಿಶೇಷ ಪೂಜೆ, ವಸತಿ ದಾಸೋಹ ವ್ಯವಸ್ಥೆ ಇರುವುದಿಲ್ಲ.
January 15, 2025