ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗಲಿ

ಹರಪನಹಳ್ಳಿ : ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಒತ್ತಾಯ

ಹರಪನಹಳ್ಳಿ, ಆ.6- ರೈತರು ಬೆಳೆದಂತಹ ಬೆಳೆಗಳಿಗೆ ಬೆಂಬಲ ಬೆಲೆ ಸಿಗಬೇಕು. ರೈತರು ವಿವಿಧ ಬೆಳೆಗಳನ್ನು ಬೆಳೆಯಬೇಕು. ರೈತರು ಹೆಚ್ಚಾಗಿ ಸಾವಯವ ಗೊಬ್ಬರವನ್ನು ಬಳಸಬೇಕು ಎಂದು ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮಿಗಳು ಹೇಳಿದರು.

ತಾಲ್ಲೂಕಿನ ಅರಸೀಕೆರೆಯ ಕೋಲಶಾಂತೇಶ್ವರ ಮಠದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಯಿಂದಲೇ ಮಠದ ಕಟ್ಟಡಗಳನ್ನು ಕಟ್ಟಿದ್ದೇನೆ. ಕಲ್ಯಾಣ ಕರ್ನಾಟಕ ಯೋಜನೆಯ ಅಡಿಯಲ್ಲಿ ಬರುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು.

ಸಂಘದ ಕುಮಾರಸ್ವಾಮಿ ಮಾತ ನಾಡಿ, ಕಲ್ಯಾಣ ಕರ್ನಾಟಕ ಯೋಜನೆ ಯಡಿ ಯಲ್ಲಿ ಗ್ರಾಮಗಳ ವಿಕಾಸ, ಕೃಷಿ, ಆರೋಗ್ಯ, ಶಿಕ್ಷಣ, ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಗ್ರಾಮಗಳ ಅಭಿವೃದ್ಧಿ ಮಾಡುವುದೇ ಈ ಯೋಜನೆಯ ಉದ್ದೇಶ ಎಂದು ಹೇಳಿದರು.

ಮುಖಂಡರಾದ ಕಾವಲಹಳ್ಳಿ ನಾಗರಾಜ್, ಕ್ಯಾರಕಟ್ಟೆ ನಂದ್ಯಪ್ಪ, ಐ. ಸಲಾಂ ಸಾಬ್‌, ಲಕ್ಷ್ಮಣ ಹಾಗೂ ಕಲ್ಯಾಣ ಕರ್ನಾಟಕ ತಂಡದವರು ಹಾಜರಿದ್ದರು.

error: Content is protected !!