ಸೇವೆಯಲ್ಲಿ ಮಲೇಬೆನ್ನೂರು ಲಯನ್ಸ್‌ ಕ್ಲಬ್‌ ಮಾದರಿ

ಜಿಲ್ಲಾ ಲಯನ್ಸ್ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷರಾದ ಉಡುಪಿಯ ಶ್ರೀಮತಿ ವಿದ್ಯಾಲತಾ ಯು. ಶೆಟ್ಟಿ ಮೆಚ್ಚುಗೆ 

ಮಲೇಬೆನ್ನೂರು, ಆ.5- ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪನೆಗೊಂಡು 350 ವಿದ್ಯಾರ್ಥಿ ಗಳನ್ನು ಒಳಗೊಂಡ ಲಯನ್ಸ್‌ ಅನುದಾನಿತ ಶಾಲೆ ಮತ್ತು ಪ್ರತಿವರ್ಷ ಹತ್ತಾರು ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಲೇಬೆನ್ನೂರು ಲಯನ್ಸ್‌ ಕ್ಲಬ್‌ ಮಾದರಿಯಾಗಿದೆ ಎಂದು ಜಿಲ್ಲಾ ಲಯನ್ಸ್ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷರಾದ ಉಡುಪಿಯ ಶ್ರೀಮತಿ ವಿದ್ಯಾಲತಾ ಯು. ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಲಯನ್ಸ್ ಭವನದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಮಲೇಬೆನ್ನೂರು ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ತಂಡವನ್ನು ಪ್ರತಿಷ್ಠಾಪಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿರುವ ಎಲ್ಲಾ ಸೇವಾ ಸಂಸ್ಥೆಗಳಲ್ಲಿ ಲಯನ್ಸ್‌ ಕ್ಲಬ್‌ ತನ್ನ ವಿಶಿಷ್ಟ ಸೇವೆಗಳ
ಮೂಲಕ ವಿಶೇಷ ಸ್ಥಾನ ಪಡೆದುಕೊಂಡಿದ್ದು, ನಾವೆಲ್ಲರೂ ಲಯನ್ಸ್ ಸದಸ್ಯರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ವಿದ್ಯಾಲತಾ ಸದಸ್ಯರನ್ನು ಹುರಿದುಂಬಿಸಿದರು.

ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲರುಗ ಳಾದ ಡಾ. ಟಿ. ಬಸವರಾಜ್, ಎ.ಆರ್. ಉಜ್ಜಿನಪ್ಪ, ಹೆಚ್.ಎನ್. ಶಿವಕುಮಾರ್ ಮಾತನಾಡಿದರು. 

ಲಯನ್ಸ್ 317ಸಿ – 9 ರ ಪ್ರಾಂತೀಯ ಅಧ್ಯಕ್ಷ ಇ.ಎಂ. ಮಂಜುನಾಥ, ದಾವಣಗೆರೆ ಲಯನ್ಸ್ ಕ್ಲಬ್‌ ಅಧ್ಯಕ್ಷ ಎಸ್.ಓಂಕಾರಪ್ಪ, ಜಿಲ್ಲಾ ಲಯನ್ಸ್ ಛೇರ್ಮನ್ ದೇವರಮನೆ ನಾಗರಾಜ್, ದಾವಣಗೆರೆ ವಿದ್ಯಾ ನಗರ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸುದರ್ಶನ್, ಕಾರ್ಯದರ್ಶಿ ದಿಳ್ಯೆಪ್ಪ ಅವರುಗಳು ನೂತನ ತಂಡವನ್ನು ಅಭಿನಂದಿಸಿ, ಮಾತನಾಡಿದರು.

ಮಲೇಬೆನ್ನೂರು ಲಯನ್ಸ್‌ ಕ್ಲಬ್‌ ನೂತನ ಅಧ್ಯಕ್ಷರಾದ ಶ್ರೀಮತಿ ರೋಹಿಣಿ ಬಿ.ಎಂ.ಜಗದೀಶ್ವರ ಸ್ವಾಮಿ, ಕಾರ್ಯದರ್ಶಿ ನಿಟ್ಟೂರಿನ ಶ್ರೀಮತಿ ರೂಪಾ ಪಾಟೀಲ್, ಖಜಾಂಚಿ ನಿಟ್ಟೂರಿನ ಶ್ರೀಮತಿ ಪಾರ್ವತಮ್ಮ ಇ.ಎಂ. ಮರುಳಸಿದ್ದಪ್ಪ ಅವರುಗಳು ಸಸಿ ನೆಡುವ ಮೂಲಕ ಅಧಿಕಾರ ಸ್ವೀಕರಿಸಿದರು.

ಸಭೆಯ ಆರಂಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಲಯನ್ಸ್ ಕ್ಲಬ್‌ ಮಾಜಿ ಅಧ್ಯಕ್ಷ ಕುಂಬಳೂರಿನ ಕೆ.ಎನ್. ಹನುಮಂತಪ್ಪ ಅವರಿಗೆ ಮೌನಾಚರಣೆ ಮೂಲಕ
ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಲಯನ್ಸ್ ಮಾಜಿ ಅಧ್ಯಕ್ಷರಾದ ಇ.ಎಂ. ಮರುಳಸಿದ್ದಪ್ಪ, ಡಾ.ಹೆಚ್.ಜೆ. ಚಂದ್ರಕಾಂತ್, ಎನ್.ಜಿ. ಬಸವನಗೌಡ, ಹೊನ್ನಾಳಿ ಲಯನ್ಸ್‌ನ ಅರಕೆರೆಯ ಅಮಿತ್ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಓ.ಜಿ. ರುದ್ರಗೌಡ್ರು ಸ್ವಾಗತಿಸಿದರು. ಬಿ.ಎಂ. ಜಗದೀಶ್ವರ ಸ್ವಾಮಿ ಧ್ವಜ ವಂದನೆ ಸ್ವೀಕರಿಸಿದರು. ಹೆಚ್.ಜಿ. ಚಂದ್ರಶೇಖರ್, ಎನ್.ಜಿ. ಶಿವಾಜಿ ಪಾಟೀಲ್ ನಿರೂಪಿಸಿದರು. ಜಿಗಳಿಯ ಗೌಡ್ರ ಬಸವರಾಜ್ ವಂದಿಸಿದರು.

error: Content is protected !!