ದಾವಣಗೆರೆ, ಜೂ.27- ಪ್ರಪಂಚದಲ್ಲಿ ಜನ್ಮ ತಾಳಿದ ಮೇಲೆ ಸಾವು ಖಚಿತ, ಹುಟ್ಟು ಹಾಗೂ ಸಾವಿನ ಮಧ್ಯೆ ನಡೆಯುವ ಜೀವನ ಸಂಘರ್ಷಗಳೇ ಒಂದು ನೆನಪು. ಆದರೆ ಉತ್ತಮ ಕಾರ್ಯ, ಸೇವೆಗಳು ಎಂದಿಗೂ ಅಮರವಾಗಿರುತ್ತವೆ ಎಂದು ಮೌಲಾನಾ ಮಹಮ್ಮದ್ ಹನೀಫ್ ರಜಾ ಹೇಳಿದರು.
ಜಿಲ್ಲಾಡಳಿತದ ಸಹಯೋಗ ದೊಂದಿಗೆ ಮುಸ್ಲಿಂ ಸಮಾಜದ ವತಿಯಿಂದ ಇಲ್ಲಿನ ತಾಜ್ ಪ್ಯಾಲೇಸ್ ನಲ್ಲಿ ಕೊರೊನಾ ವಾರಿಯರ್ಸ್‌ಗೆ ಇಂದು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೊರೊನಾ ಮಹಾಮಾರಿ ಸಂದಿ ಗ್ಧ ಸ್ಥಿತಿಯಲ್ಲಿ ಜೀವನ ಕಳೆಯುತ್ತಿದ್ದ ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗಾಗಿ ಕೋವಿಡ್ ಕೇಂದ್ರ ತೆರೆದು ಸಾರ್ವಜನಿಕರಿಗೆ
ಅನುಕೂಲ ಮಾಡಿಕೊಟ್ಟ ಸಮಾಜದ ಮುಖಂಡರ ಸೇವೆ ಶ್ಲ್ಯಾಘನೀಯ ಎಂದು ಪ್ರಶಂಸಿಸಿದ ಮೌಲಾನಾ ಅವರು ಜಾತಿ, ಭೇದ ಮರೆತು ಸಮಾಜ ಸೇವೆ ಮಾಡಿದ ಗಣ್ಯರು, ಸಮಾಜ ಸೇವಕರ ಈ ಕಾರ್ಯಸ್ಮರಣೀಯ. ಜೀವನ ಶಾಶ್ವತ ಅಲ್ಲ, ಸಮಾಜಕ್ಕಾಗಿ ಮಾಡಿದ ಸೇವೆ ಶಾಶ್ವತ ಎಂದರು.
ಹಳೇ ಭಾಗದಲ್ಲಿನ ರೋಗಿಗಳ ಅನುಕೂಲತೆಯನ್ನು ದೃಷ್ಟಿಯನ್ನಿಟ್ಟು ಕೊಂಡು ಮಿತ್ರವೃಂದದವರು ಸೇರಿ ಆಯೋಜಿಸಿದ ಈ ಸೇವೆಗೆ ಸ್ಪಂದಿಸಿದ ಜಿಲ್ಲಾಡಳಿತದ ಮಾರ್ಗದರ್ಶನ ನಮಗೆ ಧೈರ್ಯ ನೀಡಿತು ಎಂದು ಮುಸ್ಲಿಂ ಮುಖಂಡ ಜೆ. ಅಮಾನುಲ್ಲಾ ಖಾನ್ ಹೇಳಿದರು.
ತಾಜ್ ಪ್ಯಾಲೇಸ್‌ನ ಮಾಲೀಕ ದಾದಾಪೀರ್, ಪಾಲಿಕೆ ಸದಸ್ಯ ಸೈಯದ್ ಚಾರ್ಲಿ ಅವರನ್ನು ಸೇರಿದಂತೆ ಸಮಾಜದ ಮುಖಂಡರ ಪರೋಕ್ಷ ಬೆಂಬಲ ಈ ಸೇವೆಗೆ ಪುಷ್ಠಿ ನೀಡಿತು ಎಂದರು.
ತಹಶೀಲ್ದಾರ್ ಗಿರೀಶ್, ಸಿಪಿಐ ಗಜೇಂದ್ರಪ್ಪ, ಟಾರ್ಗೆಟ್ ಅಸ್ಲಂ, ಎಸ್‌ಡಿಪಿಡಿ ಜಿಲ್ಲಾಧ್ಯಕ್ಷ ಫಯಾಜ್ ಆಹ್ಮದ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೈದ್ಯ ವೃಂದದವರಿಗೆ, ಸಮಾಜ ಸೇವಕರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.