ಮಲೇಬೆನ್ನೂರು : ಮಲೇರಿಯಾ ವಿರೋಧಿ ಮಾಸಾಚರಣೆಯಲ್ಲಿ ಟಿಹೆಚ್ಓ ಡಾ.ಚಂದ್ರಮೋಹನ್ ಮನವಿ
ಮಲೇಬೆನ್ನೂರಿನಲ್ಲಿ ಕಳೆದ 5 ವರ್ಷಗಳಿಂದ ಒಂದೂ ಮಲೇರಿಯಾ ಕೇಸಿಲ್ಲ : ಡಾ.ಲಕ್ಷ್ಮಿದೇವಿ
ಮಲೇಬೆನ್ನೂರು, ಜೂ.25- ಕೋವಿಡ್ 3ನೇ ಅಲೆ ಬರುವ ಸಾಧ್ಯತೆ ಇದ್ದು, 2ನೇ ಅಲೆ ಕಡಿಮೆ ಆಗಿದೆ ಎಂದು ಯಾರೂ ಮೈ ಮರೆಯದೇ ಸದಾ ಎಚ್ಚರದಿಂದಿರಬೇಕೆಂದು ಹರಿಹರ ತಾಲ್ಲೂಕು ಟಿಹೆಚ್ಓ ಡಾ.ಚಂದ್ರಮೋಹನ್ ಮನವಿ ಮಾಡಿದ್ದಾರೆ.
ಅವರು ಶುಕ್ರವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲಸಿಕೆ ಹಾಕಿಸಿಕೊಂಡವರೂ ಜಾಗೃತರಾಗಿರ ಬೇಕು. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸಿ ಎಂದ ಅವರು, ಮಳೆಗಾಲ ಆರಂಭವಾ ಗಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಅವು ಕಚ್ಚುವುದರಿಂದ ಮಲೇರಿಯಾ ದಂತಹ ರೋಗ ಗಳು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಜಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಸಂಜೆ ವೇಳೆ ಮನೆಯ ಬಾಗಿಲು ಸೇರಿದಂತೆ ಎಲ್ಲಾ ಕಿಟಕಿಗ ಳನ್ನು ಮುಚ್ಚಿ, ಸೊಳ್ಳೆಗಳು ಒಳಗಡೆ ಬರದಂತೆ ನೋಡಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉಪತಹಶೀಲ್ದಾರ್ ಆರ್.ರವಿ ಮಾತನಾಡಿ, ಸ್ವಚ್ಛತೆಗೆ ಒತ್ತುಕೊಟ್ಟಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಪುರಸಭೆ ಮುಖ್ಯಾಧಿಕಾರಿ ದಿನಕರ್ ಮಾತ ನಾಡಿ, ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಸೊಳ್ಳೆಗಳು ಉತ್ಪತ್ತಿಯಾಗದಂತೆ ಔಷಧಿ ಸಿಂಪರಣೆ ಮಾಡಲಾಗುವುದು ಎಂದರು.
ಪ್ತಾಸ್ತಾವಿಕವಾಗಿ ಮಾತನಾಡಿದ ವೈದ್ಯಾಧಿ ಕಾರಿ ಡಾ.ಲಕ್ಷ್ಮಿದೇವಿ ಮಾತನಾಡಿ, ನಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಳೆದ 5 ವರ್ಷ ಗಳಿಂದ ಒಂದೂ ಮಲೇರಿಯಾ ಕೇಸ್ ಪತ್ತೆಯಾ ಗಿಲ್ಲ. ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡು ತ್ತಿರುವುದು ಸಮಾಧಾನ ತಂದಿದೆ ಎಂದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ.ಹೊರಕೇರಿ, ಪತ್ರಕರ್ತರಾದ ನಟರಾಜ್, ಸದಾನಂದ್, ದೇವರಾಜ್ ಮಾತನಾಡಿದರು.
ವೈದ್ಯರಾದ ಡಾ.ಸುಭಾಷ್, ಡಾ.ಅರ್ಪಿತಾ, ಪರಿಸರ ಇಂಜಿನಿಯರ್ ಉಮೇಶ್, ಪತ್ರಕರ್ತ ರಾದ ಜಿಗಳಿ ಪ್ರಕಾಶ್, ವಾಸವಿ ರಮೇಶ್, ಕುಂಬಳೂರು ವಾಸು, ಹೊಸಳ್ಳಿ ಕರಿಬಸಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಆಶಾ ಕಾರ್ಯಕರ್ತೆ ಗಂಗಮ್ಮ ಪ್ರಾರ್ಥಿಸಿದರು. ತಾ.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಸ್ವಾಗತಿಸಿದರು. ಆರೋಗ್ಯ ಕೇಂದ್ರದ ಕಿರಣ್ ವಂದಿಸಿದರು.