ದಾವಣಗೆರೆ, ಜೂ.22- ಜಿಲ್ಲೆಯಲ್ಲಿ ಎಲ್ಲಾ ವ್ಯಾಪಾರ, ವಹಿವಾಟಿಗೆ ಅನುಮತಿ ನೀಡುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಬೆಳಿಗ್ಗೆ ನಗರದ ಜವಳಿ, ಬೆಳ್ಳಿ-ಬಂಗಾರ ವರ್ತಕರು ಸೇರಿದಂತೆ ಹಲವು ವಾಣಿಜ್ಯ ವಹಿವಾಟುಗಳ ವರ್ತಕರ ನಿಯೋಗ ಎಸ್ಸೆಸ್ ನಿವಾಸಕ್ಕೆ ಆಗಮಿಸಿ ಮನವಿ ಸಲ್ಲಿಸಿತು.
ಈ ಮನವಿಗೆ ಸ್ಪಂದಿಸಿದ ಎಸ್ಸೆಸ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಸಂಪರ್ಕಿಸಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟುಗೆ ಅನುಮತಿ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಅಂಗಡಿಗಳಿಗೆ ಅನುಮತಿ
ದಾವಣಗೆರೆ, ಜೂ. 22- ಹವಾ ನಿಯಂತ್ರಿತ ಮಳಿಗೆ, ಮಾಲ್ ಮತ್ತು ಸಮುಚ್ಛಯಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಮಾದರಿ ಮಳಿಗೆಗಳನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ತೆರೆಯಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಸೋಮವಾರದಿಂದ ಸೀಮಿತ ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿತ್ತು. ನಂತರದಲ್ಲಿ ಮೊಬೈಲ್ ಹಾಗೂ ಸ್ಟೇಷನರಿ ಅಂಗಡಿಗಳಿಗೆ ಮಂಗಳವಾರದಿಂದ ಅನುಮತಿ ನೀಡಲಾಗಿತ್ತು.
ಇದಕ್ಕೂ ಮುಂಚೆ ಚಾಮರಾಜನಗರ, ದಾವಣಗೆರೆ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ವಿಪತ್ತು ನಿರ್ವಹಣಾ ಉನ್ನತ ಸಮಿತಿ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಜುಲೈ 5ರ ಬೆಳಗ್ಗೆ 5 ಗಂಟೆವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ಜಿಲ್ಲಾಧಿಕಾರಿಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಇಂದು ಅಥವಾ ನಾಳೆಯಿಂದಲೇ ಲಾಕ್ ಡೌನ್ ತೆರವಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳು ಭರವಸೆ ನೀಡಿ ಸ್ವಲ್ಪ ಸಮಯದಲ್ಲೇ ಸರ್ಕಾರದಿಂದ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳಿಗೆ ಅನ್ವಯವಾಗುವಂತೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಎಲ್ಲಾ ರೀತಿಯ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ ನೀಡಿರುವುದಾಗಿ ಆದೇಶ ಬಂದಿದೆ.
ಈ ಸಂದರ್ಭದಲ್ಲಿ ವರ್ತಕರುಗಳಾದ ಬಿ.ಸಿ.ಉಮಾಪತಿ, ಜಾವೀದ್ ಸಾಬ್, ವಿಜಯ್ ಎಸ್.ಜೈನ್, ಜೆ.ಹೆಚ್. ರಮೇಶ್, ಸುರೇಶ್ ಕುಮಾರ್, ಮಹೇಂದ್ರ, ಕಾಂತಿಲಾಲ್, ವಸಂತಕುಮಾರ್, ಕವಿತಾ ಚಂದ್ರಶೇಖರ್ ಮತ್ತಿತರರಿದ್ದರು.