ದಾವಣಗೆೆ, ಜೂ.18- ಜಿಲ್ಲೆಯನ್ನು ಪೂರ್ಣ ಲಾಕ್‌ಡೌನ್ ಎಂದು ಘೋಷಿಸಿ ಅಗತ್ಯ ವಸ್ತುಗಳ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ನೀಡಲ್ಪ ಟ್ಟಿದ್ದ ಶುಕ್ರವಾರ ಜನತೆ ಯಾವುದೇ ಅವರಸ, ಆತಂಕ ಇಲ್ಲದೆ ವಸ್ತುಗಳನ್ನು ಖರೀದಿಸಿದರು.
ನಗರದ ಮಾರುಕಟ್ಟೆ ಪ್ರದೇಶಗಳಾದ ಕೆ.ಆರ್. ಮಾರುಕಟ್ಟೆ, ಮಂಡಿಪೇಟೆ, ಗಡಿಯಾರ ಕಂಬ, ಚೌಕಿಪೇಟೆ, ಕಾಳಿಕಾದೇವಿ ರಸ್ತೆ ಮುಂತಾದ ಕಡೆ ಬೆಳಿಗ್ಗೆ 6 ರಿಂದ 12ರವರೆಗೆ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಮಾರುಕಟ್ಟೆ ಯಲ್ಲಿ ಖರೀದಿ ಪ್ರಕ್ರಿಯೆ ಶಾಂತವಾಗಿಯೇ ನಡೆಯಿತು.
ಇನ್ನು ನಗರದಲ್ಲಿ ದಿನಸಿ ಅಂಗಡಿಗಳಲ್ಲೂ ಜನತೆ ನಿರಾಳತೆಯಿಂದಲೇ ಖರೀದಿ ನಡೆಸಿದರು. ಬೆಳಿಗ್ಗೆಯೇ ಬಾರ್ ಗಳ ಮುಂದೆ ಕುಡುಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪಾರ್ಸೆಲ್‌ಗೆ ಮಾತ್ರ ಅವಕಾಶವಿತ್ತು.
ಸಲೂನ್ ಶಾಪ್‌ಗಳಿಗೆ ಅನುಮತಿ ಇರದಿದ್ದರೂ ಪೊಲೀಸರ ಭಯದಿಂದ ಹಲವೆಡೆ ಅರ್ಧ ಬಾಗಿಲು ಹಾಕಿಕೊಂಡು ಕ್ಷೌರ ಮಾಡಲಾಗುತ್ತಿತ್ತು. ಮಾರಾಟ ಹಾಗೂ ಖರೀದಿ ಮಧ್ಯಾಹ್ನ 12ರವರೆಗೆ ಮಾತ್ರ ಸೀಮಿತವಾಗಿತ್ತಾದರೂ ವಾಹನಗಳ ಓಟಾಟ ಮಾತ್ರ ಸಂಜೆಯವರೆಗೂ ಹೆಚ್ಚಾಗಿತ್ತು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಕೆಲವೆಡೆ ಮಾತ್ರ ಪೊಲೀಸರು ತಪಾಸಣೆ ನಡೆಸಿದ್ದರಿಂದ ಉಳಿದೆಡೆ ವಾಹನ ಸವಾರರು ನಿರಾತಂಕವಾಗಿ ಓಡಾಡಿದರು.
ಮಧ್ಯಾಹ್ನದ ನಂತರ ಲಾಕ್‌ಡೌನ್ ಕೇವಲ ಪ್ರಮುಖ ರಸ್ತೆಗಳಿಗೆ ಮಾತ್ರ ಸೀಮೀತ ಎಂಬಂತೆ ಕಾಣುತ್ತಿತ್ತು. ಬಡಾವಣೆಗಳಲ್ಲಿ ಜನ ಸಂದಣಿ ಮಾಮೂಲಿನಂತೆ ಇತ್ತು. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಲೇ ಜನರು ಮಾಸ್ಕ್ ಇಲ್ಲದಂತೆ ಓಡಾಡುತ್ತಿರುವುದು ಹೆಚ್ಚಾಗಿತ್ತು.
ಸಂಜೆಯಾಗುತ್ತಲೇ ವಿವಿಧ ಬಡಾವಣೆಗಳ ಜನತೆ ತಮ್ಮ ಬೀದಿಗಳಲ್ಲಿ ಗುಂಪು ಗುಂಪಾಗಿ ನಿಂತು ಚರ್ಚಿಸುವುದು, ರಾತ್ರಿ ಊಟದ
ನಂತರ ಮನೆಯ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಗುಂಪು ಗುಂಪಾಗಿಯೇ ವಿಹರಿಸುತ್ತಿದ್ದುದು ಹೆಚ್ಚಾಗಿತ್ತು.