ದಾವಣಗೆರೆ, ಜೂ. 15- ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕ ಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಮಾಜಮುಖಿ ಕಾರ್ಯಕ್ಕೆ ಯುವಕರು ಮುಂದೆ ಬರುತ್ತಿರುವುದು ಸಂತೋಷದ ವಿಷಯ ಎಂದು ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಬಿ.ಟಿ.ಅಚ್ಯುತ್ ತಿಳಿಸಿದರು.
ನಗರದ ಬ್ರಾಹ್ಮಣ ಸಮಾಜದ ಕಚೇರಿ ಆವರಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಬ್ರಾಹ್ಮಣ ಯುವ ವೇದಿಕೆ ಯಿಂದ ನಡೆದ ಪುರೋಹಿತರಿಗೆ, ಅಡುಗೆ ಸಹಾಯಕರಿಗೆ ಆಹಾರ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊರೊನಾ ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ತೊಂದರೆಯಲ್ಲಿದ್ದವರಿಗೆ ಪ್ರತಿಯೊಬ್ಬರೂ ಸಹ ತಮ್ಮ ಕೈಲಾದ ಸಹಾಯ ಮಾಡಬೇಕು ಹಾಗೂ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಮಾಧವ ಪದಕಿ, ಜಿಲ್ಲಾ ಬ್ರಾಹ್ಮಣ
ಯುವ ವೇದಿಕೆ ಅಧ್ಯಕ್ಷ ಪಿ.ಸಿ.ರಾಮನಾಥ, ಕಾರ್ಯದರ್ಶಿ ಅನಿಲ್ ಬಾರೆಂಗಳ್, ಖಜಾಂಚಿ ಎಂ.ಜಿ. ಶ್ರೀಕಾಂತ್, ಡಾ. ಆನಂದ ಋಗ್ವೇದಿ, ತಾ. ಬ್ರಾಹ್ಮಣ ಯುವ ವೇದಿಕೆ ಉಪಾಧ್ಯಕ್ಷ ಬದರಿ ಪ್ರಸಾದ್, ಕಾರ್ಯದರ್ಶಿ ಶ್ರೀಧರ (ಶ್ಯಾಂ), ಕರ್ನಾಟಕ ರಾಜ್ಯ ಬ್ರಾಹ್ಮಣ ನಿಗಮ ಮಂಡಳಿ ನಿರ್ದೇಶಕ ಪಿ.ಸಿ. ಶ್ರೀನಿವಾಸ್, ಸದಸ್ಯರಾದ ವಿಕ್ರಂ ಜೋಷಿ, ರಜತ್, ವಿನಯ ಪದಕಿ, ಉತ್ಸವ ರಾವ್, ಕೆ.ಎಂ.
ಶ್ರೀಕಾಂತ್, ಹನುಮಂತರಾವ್, ದತ್ತಾತ್ರೇಯ ಜೋಷಿ ಇತರರು ಇದ್ದರು. ಈ ಸಂದರ್ಭದಲ್ಲಿ ದಾನಿಗಳಾದ ವಿಕ್ರಂ ಜೋಷಿ ಹಾಗೂ ಅವರ ತಾಯಿ ವಿಜಯಾ ಜೋಷಿಯವರನ್ನು ಸನ್ಮಾನಿಸಲಾಯಿತು.